ದೀಪಿಕಾ ಡೋಂಟ್ ಕೇರ್!

ದೀಪಿಕಾ ಡೋಂಟ್ ಕೇರ್!

ಮುಂಬೈ, ಡಿ. 29 : ಕಳೆದ ವರ್ಷ ನ.14ರಂದು ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಇಟಲಿಯ ಖಾಸಗಿ ಹೊಟೇಲ್ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ಸುದ್ದಿ ಹಳತಾಗುತ್ತಿರುವಾಗಲೇ ಇವರ ಬಗ್ಗೆ ಮತ್ತೊಂದು ಹೊಸ ಸುದ್ದಿ ಹುಟ್ಟಿಕೊಂಡಿದೆ.
ಅದೇ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರಂತೆ! ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ ದಪ್ಪಗಾಗಿ ಕಾಣಿಸಿಕೊಂಡಿದ್ದರಿಂದ ‘ದೀಪಿಕಾ ಗರ್ಭಿಣಿಯಾಗಿದ್ದಾರೆ’ ಎಂಬ ವಿಷಯ ಎಲ್ಲೆಡೆ ಹರಿದಾಡಿತ್ತು. ಅಲ್ಲದೆ, ಇನ್ಸ್ಟಾಗ್ರಾಂನಲ್ಲಿ ರಣವೀರ್ ಸಿಂಗ್ ಹಾಕಿದ ಪೋಸ್ಟ್ವೊಂದಕ್ಕೆ ದೀಪಿಕಾ ‘ಡ್ಯಾಡಿ’ ಎಂದು ಕಮೆಂಟ್ ಮಾಡಿದ್ದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಈಗ ಆ ಎಲ್ಲ ವದಂತಿಗಳಿಗೆ ನಟಿ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

‘ಚಪಾಕ್’ ಚಿತ್ರದ ಪ್ರಚಾರದ ವೇಳೆ ಎದುರಾದ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ‘ನನ್ನ ಸಿನಿಮಾ ಕರಿಯರ್ನಲ್ಲಿ ಈ ರೀತಿಯ ವದಂತಿಗಳನ್ನು ಸಾಕಷ್ಟು ಕೇಳಿದ್ದೇನೆ. ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos