ಮೊಟ್ಟೆ ತಿಂದು ವ್ಯಕ್ತಿ ಸಾವು

ಮೊಟ್ಟೆ ತಿಂದು ವ್ಯಕ್ತಿ ಸಾವು

ಲಕ್ನೋ , ನ. 5 : ಕೇವಲ 2 ಸಾವಿರ ರೂ. ಹಣಕ್ಕಾಗಿ ವ್ಯಕ್ತಿ ಸಾವನ್ನಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೇವಲ 2 ಸಾವಿರ ರೂ. ವಿಷಯ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್ಪುರದ ಬಿಬಿಗಂಜ್ ಮಾರ್ಕೆಟ್ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ.
ಸುಭಾಷ್ ಸ್ನೇಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಚಾಲೆಂಜ್ ಹಾಕಿದ ಸ್ವೀಕರಿಸಿ ಸುಭಾಷ್ ಮೊಟ್ಟೆ ತಿನ್ನಲು ಶುರು ಮಾಡಿ 41 ಮೊಟ್ಟೆ ತಿಂದ ನಂತರ 42ನೇ ಮೊಟ್ಟೆ ತಿನ್ನಲು ಮುಂದಾದಾಗ ಪ್ರಜ್ಞೆ ತಪ್ಪಿ ಬೀದ್ದು, ಮೃತಪಟ್ಟಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos