ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು

ಡೆತ್ ನೋಟ್ ಬರೆದಿಟ್ಟು ಮಹಿಳೆ  ನೇಣಿಗೆ ಶರಣು

ಬೆಂಗಳೂರು: ಕೌಟುಂಬಿಕ ಕಲಹದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಹೆಬ್ಬಾಳದ ಮನೋರಾಯನ ಪಾಳ್ಯದಲ್ಲಿ   ನಡೆದಿದೆ.

ಪುಷ್ಪವತಿ(30)  ತನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ತನ್ನ 5 ವರ್ಷದ ಮಗ ಜೀವನ್ ಹಾಗೂ 5 ತಿಂಗಳ ಮಗುವಿಗೆ ವಿಷವುಣಿಸಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುಷ್ಪವತಿ ಮೂಲತಃ ತೀರ್ಥಹಳ್ಳಿ ನಿವಾಸಿಯಾಗಿದ್ದು, 10 ವರ್ಷದ ಹಿಂದೆ ನಾಗರಾಜ್ ಎಂಬುವರೊಂದಿಗೆ ಪ್ರೇಮವಿವಾಹವಾಗಿದ್ದು, ಘಟನೆಗೆ ಸಂಬಂಧಪಟ್ಟ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos