ಮೃತಪಟ್ಟ ಘೇಂಡಾಮೃಗ

ಮೃತಪಟ್ಟ ಘೇಂಡಾಮೃಗ

ಬೆಂಗಳೂರು, ಜು. 3 : ಘೇಂಡಾಮೃಗದ ಮರಿಯೊಂದು ಮೃತಪಟ್ಟು ಕೆಳಗೆ ಬಿದ್ದಿದ್ದ ತನ್ನ ತಾಯಿಯನ್ನು ಎಬ್ಬಿಸುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಾಸವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ “ಕಳ್ಳ ಬೇಟೆಗಾರರ ಗುಂಡಿಗೆ ಬಲಿಯಾದ ತಾಯಿಯನ್ನು ಘೇಂಡಾಮೃಗ ಮರಿ ಎಬ್ಬಿಸಲು ಪ್ರಯತ್ನ ಮಾಡುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಪ್ರವೀಣ್ ಅವರ ಪ್ರಕಾರ, ಕಳ್ಳ ಬೇಟೆಗಾರರು ಘೇಂಡಾಮೃಗದ ಕೊಂಬು ಕೀಳಲು ಅದನ್ನು ಹೊಡೆದು ಸಾಯಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಘೇಂಡಾಮೃಗ ಮರಿ ನೆಲದ ಮೇಲೆ ಬಿದ್ದಿದ್ದ ತನ್ನ ತಾಯಿಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ನೋಡುಗರಿಗೆ ಕಣ್ಣೀರು ತರಿಸುವಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos