ಭೀಕರ ರಸ್ತೆ ಅಪಘಾತ : ಐವರು ಸಾವು

ಭೀಕರ ರಸ್ತೆ ಅಪಘಾತ : ಐವರು ಸಾವು

ಬೆಳಗಾವಿ,ನ. 8 : ಬೆಳಗಾವಿ ಜಿಲ್ಲೆಯ ಮೂಲದ ಐವರು ಭಕ್ತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಶುಕ್ರವಾರ ನಡೆದಿದೆ.
ಏಕಾದಶಿ ಪ್ರಯುಕ್ತ ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿದ ಹಿನ್ನಲೆ ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಕೃಷ್ಣ ವಾಮನ ಗಾಂವ್ಕರ (50), ಮಹಾದೇವ ಕಣಬರಕರ (48), ಬಾಳು ಅಂಬೇವಾಡಿಕರ (50), ಅರುಣ ದತ್ತು ಮುತಗೇಕರ (38) ಹಾಗೂ ಹಂಗರಗಾ ಗ್ರಾಮದ ಎ.ಎ. ಪಾಟೀಲ್ ಮೃತ ಪಟ್ಟ ದುರ್ದೈವಿಗಳು.
ಮಂಡೋಳಿ ಗ್ರಾಮದಿಂದ ಗುರುವಾರ ರಾತ್ರಿ ಟೆಂಪೋದಲ್ಲಿ ಪಂಢರಪುರಕ್ಕೆ ತೆರಳಿದ್ದರು. ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಇಂದು ಬೆಳಗಿನ ಜಾವ 4 ಗಂಟೆ ಎದುರಿನಿಂದ ಹೋಗುತ್ತಿದ್ದ ಟ್ರಾಕ್ಟರ್ಗೆ ಭಕ್ತರಿದ್ದ ಟೆಂಪೋ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos