ಡಿಡಿ ನ್ಯೂಸ್ ನಿರೂಪಕಿ ನೀಲಂ ವಿಧಿವಶ

ಡಿಡಿ ನ್ಯೂಸ್ ನಿರೂಪಕಿ ನೀಲಂ ವಿಧಿವಶ

ನವದೆಹಲಿ, ಆ.18 : ದೂರದರ್ಶನ ಸುದ್ದಿವಾಹಿನಿಯ ಸಂಸ್ಥಾಪಕ ನಿರೂಪಕಿಯರಲ್ಲಿ ಒಬ್ಬರಾದ ನೀಲಂ ಶರ್ಮಾ (50) ಶನಿವಾರ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ದೂರದರ್ಶನದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೀಲಂ ಶರ್ಮಾ, ಡಿಡಿ ನ್ಯೂಸ್ನ ಸಂಸ್ಥಾಪಕ ನಿರೂಪಕರ ಪೈಕಿ ಒಬ್ಬರಾಗಿದ್ದರು. ಸುದ್ದಿ ನಿರೂಪಣೆಯ ಜೊತೆಗೆ ‘ಬಡೀ ಚರ್ಚಾ’ ಹಾಗೂ ಮಹಿಳಾ ವಿಶೇಷ ‘ತೇಜಸ್ವಿನಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 60ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳನ್ನೂ ಅವರು ನಿರ್ಮಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos