ಶಾಸಕನ ಗೌರವ ಡಾಕ್ಟರೇಟ್ ತಡೆದ ಡಿಸಿಪಿ!

ಶಾಸಕನ ಗೌರವ ಡಾಕ್ಟರೇಟ್ ತಡೆದ ಡಿಸಿಪಿ!

ಮೈಸೂರು: ನಕಲಿ ಯೂನರ‍್ವಸಿಟಿ ಹೆಸರಲ್ಲಿ ಡಾಕ್ಟರೇಟ್ ಪದವಿ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಡಾಕ್ಟರೇಟ್ ಪದವಿ ಪಡೆಯಲು ಬಂದಿದ್ದ ಶಾಸಕರೊಬ್ಬನ್ನು ವಾಪಸ್ ಕಳುಹಿಸಿದ ಘಟನೆ ನಗರದಲ್ಲಿ ಸಂಭವಿಸಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂರ‍್ನ್ಯಾಷನಲ್ ಗ್ಲೋಬಲ್ ಪೀಸ್ ಯೂನರ‍್ವಸಿಟಿ ಹೆಸರಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಕರ‍್ಯಕ್ರಮ ಶನಿವಾರ ಬೆಳಗ್ಗೆ ನಡೆಯುತ್ತಿತ್ತು. ಇದು ನಕಲಿ ಡಾಕ್ಟರೇಟ್ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕರ‍್ಯಕ್ರಮಕ್ಕೆ ದಾಳಿ ನಡೆಸಿದ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ, ಕರ‍್ಯಕ್ರಮ ಆಯೋಜಿಸಿದ್ದ ಮೂವರನ್ನು ವಶಕ್ಕೆ ಪಡೆಯಿತು. ದಾಳಿ ವೇಳೆ ಹಲವರು ಕಾಲ್ಕಿತ್ತರು. ಕರ‍್ಯಕ್ರಮದ ಮುಖ್ಯಅತಿಥಿಯಾಗಿ ಭಾಗಿಯಾಗಿದ್ದ ಹರಿಹರ ಶಾಸಕ ರಾಮಪ್ಪ ಅವರ ಮನವೊಲಿಸಿದ ಡಿಸಿಪಿ, ಈ ನಕಲಿ ಯೂನರ‍್ವಸಿಟಿ ಮುಂದಾಗಿತ್ತು ಎಂದು ಗೊತ್ತಾಗಿದೆ. ನಕಲಿ ಡಾಕ್ಟರೇಟ್ ಹಂಚಲು ತಂದಿದ್ದ 150 ರ‍್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು, ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬುವವರನ್ನು ಬಂಧಿಸಿದೆ.
ಕಳೆದ ಎಂಟು ರ‍್ಷದಿಂದ ಹಣ ಪಡೆದು ನಕಲಿ ಡಾಕ್ಟರೇಟ್ ಪದವಿ ನೀಡಲಾಗುತ್ತಿತ್ತು. ನಕಲಿ ಪದವಿ ಕೊಡಲು ತಲಾ 25 ಸಾವಿರದಿಂದ 1 ಲಕ್ಷ ರೂ. ವಸೂಲಿ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos