ಕೊರೋನಾ ಬಗ್ಗೆ ಆತಂಕ ಬೇಡ ಎಂದ ಡಿಸಿಎಂ!

ಕೊರೋನಾ ಬಗ್ಗೆ ಆತಂಕ ಬೇಡ ಎಂದ ಡಿಸಿಎಂ!

ದೆಹಲಿ: ಕೋವಿಡ್-19 ಸಮಸ್ಯೆಗೆ ಸಂಬಂಧಿಸಿದಂತೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಆರೋಗ್ಯ ಇಲಾಖೆಯು ಇಂದು ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕೊರೊನಾ ವೈರಸ್ ಮ್ಯುಟೇಶನ್ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದರು.

ಕೋವಿಡ್ ಬಗ್ಗೆ ದಯವಿಟ್ಟು ಯಾರು ಗಾಬರಿ ಆಗುವುದು ಬೇಡ. ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಜಾಸ್ತಿ ಆಗುತ್ತಿದೆ ಅಂತ ಅನ್ಕೋಬೇಡಿ.

ನಾವು ಎಲ್ಲಾ ಮಾಹಿತಿಯನ್ನು ಮಾಧ್ಯಮಕ್ಕೂ ಸಹ ನೀಡುತ್ತೇವೆ. ಈಗಾಗಲೇ ಜನರು ಮಾಸ್ಕ್ ಹಾಕಿಕೊಳ್ಳುತ್ತೊದ್ದಾರೆ. ಆದರೆ ಯಾರು ಸದ್ಯಕ್ಕೆ ಗಾಬರಿ ಪಡುವುದು ಬೇಡ ಎಂದು ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಹೇಳಿದ್ದೇವೆ. ಆಸ್ಪತ್ರೆಗಳಲ್ಲಿ ಐಸಿಯು ಬೆಡ್ಸ್, ಆಕ್ಸಿಜನ್, ಪಿಪಿಇ ಕಿಟ್, ಔಷಧಿಗಳು, ಮಾಸ್ಕ್ ಎಲ್ಲವನ್ನೂ ಸಜ್ಜುಗೊಳಿಸಲಾಗುತ್ತಿದೆ. ಅಗತ್ಯ ಬಿದ್ದರೆ ಎಲ್ಲದ್ದಕ್ಕೂ ನಾವು ತಯಾರಿದ್ದೇವೆ ಎಂದು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos