ಹೊಸ ಇತಿಹಾಸ ಬರೆದ ಮಿಲ್ಲರ್

ಹೊಸ ಇತಿಹಾಸ ಬರೆದ ಮಿಲ್ಲರ್

ಬೆಂಗಳೂರು: ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಎಸ್​ಎಟಿ20 ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಜೋಬರ್ಗ್​ ಸೂಪರ್ ಕಿಂಗ್ಸ್​ ವಿರುದ್ಧ ಮಿಲ್ಲರ್ 47 ರನ್​​ ಬಾರಿಸಿದರು ಈ ಮೂಲಕ 10000 ರನ್ ಪೂರೈಸಿದ್ದಾರೆ.  ಡೇವಿಡ್ ಮಿಲ್ಲರ್ ಇದುವರೆಗೆ 423 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 4 ಶತಕ ಹಾಗೂ 45 ಅರ್ಧಶತಕಗಳೊಂದಿಗೆ ಒಟ್ಟು 10019 ರನ್ ಕಲೆಹಾಕಿ 10 ಸಾವಿರ ರನ್ ಪೂರೈಸಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ಪರ ಮತ್ತು ಇತರೆ ಲೀಗ್​ಗಳಲ್ಲಿ ಒಟ್ಟು 455 ಪಂದ್ಯಗಳನ್ನಾಡಿರುವ ಗೇಲ್ 22 ಶತಕ ಹಾಗೂ 88 ಅರ್ಧಶತಕಗಳೊಂದಿಗೆ ಒಟ್ಟು 14562 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಮತ್ತು ಆರ್​ಸಿಬಿ ಪರ ಒಟ್ಟು 359 ಇನಿಂಗ್ಸ್ ಆಡಿರುವ ಕೊಹ್ಲಿ 8 ಶತಕ ಹಾಗೂ 91 ಅರ್ಧಶತಕಗಳೊಂದಿಗೆ 11994 ರನ್ ಕಲೆಹಾಕಿದ್ದಾರೆ.

ಇದೀಗ ಸೌತ್ ಆಫ್ರಿಕಾ ಪರ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಆಗಿ ಡೇವಿಡ್ ಮಿಲ್ಲರ್ ಹೊರಹೊಮ್ಮಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos