ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್ ದಂಪತಿ ಮೊದಲ ಬಾರಿಗೆ ಪುತ್ರಿಯ ಮುಖ ತೋರಿಸಿದ್ದಾರೆ!!

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್ ದಂಪತಿ ಮೊದಲ ಬಾರಿಗೆ ಪುತ್ರಿಯ ಮುಖ ತೋರಿಸಿದ್ದಾರೆ!!

ಬೆಂಗಳೂರು: ಬಾಲಿವುಡ್​ ಮಂದಿ ಎಲ್ಲ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷದ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಮುಂಬೈನ ಜುಹೂನಲ್ಲಿ ಕಪೂರ್​ ಕುಟುಂಬದವರು ಔತಣ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗಿಯಾದ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಮಗಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಪುತ್ರಿಯ ಮುಖವನ್ನು ತೋರಿಸಿದ್ದಾರೆ.

ನಟಿ ಆಲಿಯಾ ಭಟ್​ ಮತ್ತು ನಟ ರಣಬೀರ್​ ಕಪೂರ್​  ದಂಪತಿಯ ಅಭಿಮಾನಿಗಳಿಗೆ ಈ ವರ್ಷದ ಕ್ರಿಸ್​ಮಸ್​ ತುಂಬ ಸ್ಪೆಷಲ್​ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳು ಇವೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್​  ಮತ್ತು ರಣಬೀರ್​ ಕಪೂರ್​ ಅವರು ಮಗಳ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. ಪುತ್ರಿಗೆ ರಹಾ ಎಂದು ಹೆಸರು ಇಟ್ಟಿರುವ ಈ ದಂಪತಿ, ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಎದುರು ಮಗಳ ಜೊತೆ ಪೋಸ್​ ನೀಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್​ ಆಗಿವೆ. ಸಖತ್​ ಕ್ಯೂಟ್​ ಆಗಿರುವ ರಹಾ ಮುಖವನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos