ಮಗಳನ್ನೇ ನಿರಂತರ ರೇಪ್ ಮಾಡಿದ ಅಪ್ಪ!

ಮಗಳನ್ನೇ ನಿರಂತರ ರೇಪ್ ಮಾಡಿದ ಅಪ್ಪ!

ನವದೆಹಲಿ, ಏ. 30, ನ್ಯೂಸ್ ಎಕ್ಸ್ ಪ್ರೆಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಗುರುಗ್ರಾಮದಲ್ಲಿ ತನ್ನ 8 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಪ್ರಕರಣದಡಿಯಲ್ಲಿ ಬಂಧಿಸಲಾಗಿದೆ. 4ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕಿ ತನ್ನ ತಂದೆ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿರುವ ವಿಚಾರ ನೆರೆ ಮನೆಯವರಿಗೆ ತಿಳಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಅಪರಾಧ ವಿಭಾಗದ ಎಸಿಪಿ ಶಮ್ಶೇರ್ ಸಿಂಗ್ ಬಾಲಕಿ ಕಳೆದ ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಇದನ್ನು ಕಂಡ ನೆರೆ ಮನೆಯವರು ಆಕೆಯನ್ನು ಮಾತನಾಡಿಸಿದಾಗ ತಂದೆ ಅತ್ಯಾಚಾರ ನಡೆಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಅವರು ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಈ ಬಾಲಕಿಯ ತಾಯಿ ಕೆಲ ದಿನಗಳ ಹಿಂದಷ್ಟೇ ನಿಧನರಾಗಿದ್ದಾರೆ. ಬಳಿಕ ಆಕೆ ತಂದೆಯೊಂದಿಗೇ ಇದ್ದಳು. ಆದರೆ ತಂದೆ ತನ್ನ ಮಗಳ ಮೇಲೇ ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos