ಪುತ್ರಿ ಮೇಲೆ ಅತ್ಯಾಚಾರ

ಪುತ್ರಿ ಮೇಲೆ ಅತ್ಯಾಚಾರ

ಶಿಮ್ಲಾ, ನ. 21 : ಹೆತ್ತ ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಂದೆ ತನ್ನ 17 ವರ್ಷದ ಮಗಳ ಮೇಲೆ 8 ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ್ದು, ಬಳಿಕ ಪದೇ ಪದೇ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ತಂದೆಯ ನೀಚ ಕಾರ್ಯಕ್ಕೆ ಬೇಸತ್ತ ಮಗಳು 8 ವರ್ಷಗಳ ನಂತರ ತಂದೆಯ ವಿರುದ್ಧ ಬಾರ್ಸರ್ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos