ಕಾಫಿ ನಾಡಿನಲ್ಲಿ ದತ್ತ ಜಯಂತಿ ವಿವಾದ!

ಕಾಫಿ ನಾಡಿನಲ್ಲಿ ದತ್ತ ಜಯಂತಿ ವಿವಾದ!

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಈ ವರ್ಷ ದತ್ತ ಜಯಂತಿಗೆ ಹೊಸ ವಿವಾದಗಳಿಗೆ ಕಾರಣವಾಗುತ್ತಿದೆ. ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಏರಿದೆ.  ಅತ್ತ ಪೊಲೀಸರಿಗೆ ಟೆನ್ಶನ್ ಶುರುವಾಗಿದೆ. ಕಾಫಿ ನಾಡಿನಲ್ಲಿ ದತ್ತ ಜಯಂತಿ ವಿವಾದ ದುರ್ಗಾದಲ್ಲಿ ದತ್ತ ಜಯಂತಿಗೆ ಶ್ರೀರಾಮ ಸೇನೆ ಪ್ಲಾನ್. ವಿಶ್ವ ಹಿಂದೂ ಪರಿಷತ್ ಬಜರಂಗದಳ ನಡೆಸುತ್ತಿರುವಂತಹ ದತ್ತ ಜಯಂತಿ ಕಾಫಿ ನಾಡಲ್ಲಿ ಹೊಸ ವಿವಾದ ಹುಟ್ಟು ಹಾಕಿದೆ. ಸಂಘ ಪರಿವಾರ ವಿವಾದಿತ ಇನಾಂ ದತ್ತ ಪೀಠದಲ್ಲಿ ದತ್ತ ಜಯಂತಿ ಆಚರಿಸುವುದಕ್ಕೆ ನಿರ್ಧರಿಸಿದರೆ. ಶ್ರೀರಾಮ ಸೇನೆ ನಾಗೇನಹಳ್ಳಿ  ದರ್ಗಾದಲ್ಲಿ ದತ್ತ ಜಯಂತಿ ಆಚರಣೆಗೆ ಮುಂದಾಗಿದೆ. ದತ್ತ ಪೀಠದಲ್ಲಿ ಮುಸ್ಲಿಮರು ಉರುಸ್ ಆಚರಣೆ ಮಾಡುವುದಾದರೆ, ನಾವ್ಯಾಕೆ ದರ್ಗಾದಲ್ಲಿ ದತ್ತ ಜಯಂತಿ ಆಚರಿಸಬಾರದು ಎಂದು ಶ್ರೀರಾಮ ಸೇನೆ ಪಟ್ಟು ಹಿಡಿದಿದೆ. ಈ ಹೋರಾಟ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಸ ಟೆನ್ಶನ್ ಶುರುವಾಗಿದೆ. ಇನ್ನು ಚಿಕ್ಕಮಂಗಳೂರು ತಾಲೂಕಿನ ಹಂದಿ ಗ್ರಾಮದಲ್ಲಿ ದತ್ತ ಮಾಲಾಧಾರಿಗಳು ಮಸೀದಿ ಪಕ್ಕದ ರಸ್ತೆಯಲ್ಲಿ ಕೇಸರಿ ಧ್ವಜ ಕಟ್ಟುವುದಕ್ಕೆ ಹೋಗಿದ್ದರು. ಆಗ ಅನ್ಯಕೋಮಿನ ಯುವಕರು ಮಾಲಾಧಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮದಿಂದ ಆರು ದಿನಗಳು ಪ್ರವಾಸಿ ತಾಣಗಳಿಗೆ ನಿರ್ಬಂಧ ಏರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos