ಕನ್ವರ್ ಜೊತೆ ದರ್ಶನ್ ಸೆಲ್ಫಿ

ಕನ್ವರ್ ಜೊತೆ ದರ್ಶನ್ ಸೆಲ್ಫಿ

ಬೆಂಗಳೂರು, ಜ. 12 : ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅಂಬರೀಶ್ ಮನೆಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ಕನ್ವರ್ ಲಾಲ್ ನೋಡಿ ದರ್ಶನ್ ಖುಷಿ ಪಟ್ಟಿದ್ದಾರೆ. ಜೊತೆಗೆ ಕಲ್ವರ್ ಲಾಲ್ ಜೊತೆ ಕಾಲಕಳೆದಿದ್ದು, ಅವನೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಇದೀಗ ಈ ಫೋಟೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಪ್ರೀತಿಯಿಂದ ಸೇಂಟ್ ಬರ್ನಾಡ್ ತಳಿಯ ಶ್ವಾನವನ್ನು ಸಾಕಿದ್ದರು. ಅದಕ್ಕೆ ಕನ್ವರ್ ಲಾಲ್ ಎಂದು ಹೆಸರಿಟ್ಟಿದ್ದರು. ಅಂಬಿಗೆ ಕನ್ವರ್ ಲಾಲ್ ಎಂದರೆ ತುಂಬಾ ಪ್ರೀತಿ. ನಟ ದರ್ಶನ್ಗೂ ಕನ್ವರ್ ಲಾಲ್ ಎಂದರೆ ಅಚ್ಚುಮೆಚ್ಚು.

ಫ್ರೆಶ್ ನ್ಯೂಸ್

Latest Posts

Featured Videos