ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬಹಳ ಅದ್ದೂರಿಯಾಗಿ ತೆರೆ ಕಂಡಿದೆ, ಇದರ ಮಧ್ಯೆ ದರ್ಶನ್ ರವರು ಬಾಲಿವುಡ್ ನ ಸ್ಟಾರ್ ಖಳನಾಯಕರನ್ನು ಭೇಟಿ ಮಾಡಿದ್ದಾರೆ.
ದರ್ಶನ್ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಹಂಚಿಕೊಂಡಿದ್ದು “ಸ್ಪೆಷಲ್ ಮೀಡಿಂಗ್ ಮತ್ತು ಸ್ಪೆಷಲ್ ಮೊಮೆಂಟ್” ಎಂದು ಟ್ವೀಟ್ ಮಾಡಿದೆ.
ಸಂಜಯ್ ದತ್ ಅವರು ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೆಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಡಿ ಚಿತ್ರದ ತಂಡದ ಜತೆ ಸಂಜಯ್ ದತ್ ಇದ್ದಾರೆ. ಇದೇ ಸಮಯದಲ್ಲಿ ಕಾಟೇರ ಸಿನಿಮಾದ ಮೂಲಕ ಸದ್ಯ ಸುದ್ದಿಯಲ್ಲಿರುವ ದರ್ಶನ್ ಅವರು ಸಂಜಯ್ ದತ್‌ರನ್ನು ಭೇಟಿಯಾಗಿದ್ದಾರೆ.