‘ದರ್ಬಾರ್’ಗೆ ಸುನೀಲ್ ಶೆಟ್ಟಿ ಎಂಟ್ರಿ!

‘ದರ್ಬಾರ್’ಗೆ  ಸುನೀಲ್ ಶೆಟ್ಟಿ ಎಂಟ್ರಿ!

ಬೆಂಗಳೂರುಮೇ. 24, ನ್ಯೂಸ್ಎಕ್ಸ್ ಪ್ರೆಸ್‍: ಬಹುಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ‘ಪೈಲ್ವಾನ್’ ಕನ್ನಡ ಚಿತ್ರ ದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಬೆನ್ನಲೇ ತಮಿಳು ಚಿತ್ರರಂಗಕ್ಕೆ ಮತ್ತೆ ಸುನೀಲ್ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಅದೂ ‘ಸೂಪರ್ ಸ್ಟಾರ್’ ರಜನಿಕಾಂತ್ ಜತೆಗೆ ಎಂಬುದು ವಿಶೇಷ. ಎ.ಆರ್ ಮುರುಗದಾಸ್ ನಿರ್ದೇಶನ ‘ದರ್ಬಾರ್’ ಚಿತ್ರದಲ್ಲಿ ಖಳನಾಯಕನಾಗಿ ಸುನೀಲ್ ಶೆಟ್ಟಿ ನಟಿಸಲಿದ್ದಾರೆ.

2004ರಲ್ಲಿ ‘ಮೈ ಹೂಂ ನಾ’ ಸಿನಿಮಾದಲ್ಲಿ ಖಳನಾಗಿ ನಟಿಸಿದ್ದನ್ನು ಬಿಟ್ಟರೆ,  ಅಲ್ಲಿಂದ ಇಲ್ಲಿಯವರೆಗೆ ನೆಗೆಟಿವ್ ಶೇಡ್​ನಲ್ಲಿ ಸುನೀಲ್ ಕಾಣಿಸಿಕೊಂಡಿರಲಿಲ್ಲ. ಈಗ ‘ದರ್ಬಾರ್’ ನಲ್ಲಿ ಮತ್ತೆ ಖಳನಾಗುತ್ತಿದ್ದಾರೆ. ಈ ಚಿತ್ರದಲ್ಲಿ ಐಪಿಎಸ್ ಪೊಲೀಸ್ ಅಧಿಕಾರಿ ರಜನಿಕಾಂತ್ ಖಾಕಿ ತೊಟ್ಟಿದ್ದು, ನಯನತಾರಾ ಜೋಡಿಯಾಗಿದ್ದಾರೆ. ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಚಿತ್ರ ಬಹುಪಾಲು ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos