ದರ ಇಳಿಕೆಯಾಗಿರೋ ತರಕಾರಿ  ತುಟ್ಟಿಯಾಗಲಿದೆಯಾ?

ದರ ಇಳಿಕೆಯಾಗಿರೋ ತರಕಾರಿ  ತುಟ್ಟಿಯಾಗಲಿದೆಯಾ?

ಕೆ.ಆರ್ ಮಾರುಕಟ್ಟೆ, ಆ. 1: ಮೇ, ಜೂನ್ ತಿಂಗಳಲ್ಲಿ ಗ್ರಾಹಕರಿಗೆ ತಟ್ಟಿಯಾಗಿದ್ದ, ತರಕಾರಿಗಳ ಬೆಲೆ ಆಶಾಡ ಮಾಸ (ಜುಲೈ) ತಿಂಗಳಲ್ಲಿ ಇಳಿಕೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿತ್ತು.

ಶ್ರಾವಣ ಮಾಸ ಆರಂಭವಾಗಿದ್ದು, ಮತ್ತೆ ತರಕಾರಿಗಳ  ಬೆಲೆ ಏರಿಕೆ ಬಿಸಿ ತಟ್ಟಿದರೂ ಅಚ್ಚರಿಯೇನಿಲ್ಲ.

ಆಷಾಡ ಮಸದಲ್ಲಿ ತರಕಾರಿ ಬೆಲೆ ಇಳಿಕೆಗೆ ತರಕಾರಿಗಳ ಇಳುವರಿಯಲ್ಲಿ ಏರಿಕೆ ಕಂಡು ಬಂದಿರುವುದೂ ಒಂದು ಕಾರಣ.

ಕಳೆದ ಒಂದು ತಿಂಗಳ ಹಿಂದೆ ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತಾದರೂ ಜುಲೈ ತಿಂಗಳ ಆಷಾಡ ಮಾಸದ ಕಾರಣ ದರ ಇಳಿಕೆಯಾಗಿ ಗ್ರಾಹಕರಿಗೆ ಸಂತಸವುಂಟು ಮಾಡಿತ್ತು.

60,70,80 ರೂಗಳಿದ್ದ, ಹುರಳಿಕಾಯಿ, ಮೆಣಸಿನಕಾಯಿ, ಹೀರೆಕಾಯಿ, ಪಡವಲಕಾಯಿ, ಮೂಲಂಗಿ, ಕ್ಯಾರೆಟ್, ಬೀಟ್ರೋಟ್ ಸೇರಿ ಎಲ್ಲಾ ತರಕಾರಿಗಳ ಬೆಲೆ ದುಭಾರಿಯಾಗಿದ್ದವು.

ಈಗ ಸಗಟು ಮಾರಾಟದಲ್ಲಿ 20,30 ರೂ ಹಾಗು ಚಿಲ್ಲರೆ ಮಾರಾಟ ದರದಲ್ಲಿ 25,35 ರೂರಳಿಗೆ ತರಕಾರಿಗಳು ದೊರೆಯುತ್ತಿವೆ. ಆಷಾಡ ಮಾಸದಲ್ಲಿ ಯಾವುದೇ ಶಭ ಸಮಾರಂಭಗಳು ನಡೆಯುವುದಿಲ್ಲ ಹಾಗೂ ತರಕಾರಿ ಬೆಳೆಗಳ ಇಳುವರಿಯಲ್ಲಿ ಚೇತರಿಕೆ ಕಂಡು ಬಂದಿರುವುದರಿಂದ ಬೆಲೆ ಇಳಿಕೆಗೆ ಕಾರಣವೆಂದು ಮಾರುಕಟ್ಟೆಯ ವ್ಯಾಪಾರಿಗಳು ಹೇಳಿದ್ದಾರೆ.

ಕಳೆದ ಮೇ, ಜೂನ್ ತಿಂಗಳಲ್ಲಿ ಹುರುಳಿ ಕಾಯಿ 1 ಕೆಜಿಗೆ 100,120 ರೂ ಇತ್ತು. ಈಗ 30 ರಿದ  35 ರೂಗಳಿಗೆ ಸಿಗುತ್ತಿದೆ. ಪ್ರತಿ ಕೆಜಿ ಹಸಿಮೆಣಸಿನಕಾಯಿ 80,90 ರಿಂದ 30 ,35 ರೂಗಿಳಿದಿದೆ. ಬೆಂಡೆಕಾಯಿ, ನವಿಲುಕೋಸು,ಬ ದನೆಕಾಯಿ, ಗೋರಿಕಾಯಿ, ಮೂಲಂಗಿ, ಗೆಡ್ಡೆಕೋಸು ಸೇರಿದಂತೆ ಎಲ್ಲಾತರಕಾರಿಗಳ ಬೆಲೆ ಪ್ರತಿ ಕೆಜಿ ಗೆ 15 ರಿಂದ 20 ರೂಗಳಿಗೆ ಇಳಿಕೆಯಾಗಿದೆ.ಆಷಾಢ ಮಾಸದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಜೊತೆಗೆ ತರಕಾರಿಗಳ ಬೆಳೆ ಇಳುವರಿ ಜಾಸ್ತಿ ಇರುತ್ತದೆ ಎನ್ನುತ್ತಾರೆ ತರಕಾರಿ ಮಾರುವ ಸಗಟು ವ್ಯಾಪಾರಿಗಳು.

ಕಳೆದ ಮೂರು ತಿಂಗಳಿಂದ ಸೊಪ್ಪುಗಳ ಬೆಲೆ ಕೂಡಾ ದುಬಾರಿಯಾಗಿತ್ತಾದರೂ ಆಷಾಡ ಮಾಸದಲಿ ಇಳಿಕೆಯಾಗಿದೆ. ಮೇ, ಜೂನ್ ತಿಂಗಳಲ್ಲಿ ಸಬ್ಬಾಕ್ಷಿ ಸೊಪ್ಪು ಮತ್ತು ಕೊತಂಬರಿ ಸೊಪ್ಪು120 ರಿಂದ  180 ರೂ ವರೆಗೆ ದರ ಏರಿಕೆಯಾಗಿತ್ತು.

ಕಳೆದೊಂದು ತಿಂಗಳಿಂದ 15ರಿಂದ  20 ರೂಗಳಿಗೆ ಸಿಗುತ್ತಿರುವುದರಿಂದ ತರಕಾರಿ ಸೊಪ್ಪು ಗ್ರಾಹಕರಿಗೆ ಖುಷಿ ತಂದಿದೆ ಆದರೂ ಶ್ರಾವಣ ಮಾಸದಲ್ಲಿ ಶುಭ ಸಮಾರಂಭಗಳು ಆರಂಭವಾಗುವುದರಿಂದ ಮತ್ತೆ ಬೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುವ ನಿರೀಕ್ಷೆ ಇದೆ. ಅಗತ್ಯ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡರೂ ಕೊಂಡು ಕೊಳ್ಳಲೇಬೇಕಾದ ಅನಿವಾರ್ಯ ಎನ್ನುತ್ತಾರೆ ಗ್ರಾಹಕರಾದ ರಾಮಹನುಮಯ್ಯ.

ಫ್ರೆಶ್ ನ್ಯೂಸ್

Latest Posts

Featured Videos