ಒಮ್ಮೆ ಬಾಂಬ್ ಸ್ಫೋಟದಿಂದ ಪಾರಾದರೂ, ಮತ್ತೂ ಬೆಂಬಿಡದ ಸಾವು!

ಒಮ್ಮೆ ಬಾಂಬ್ ಸ್ಫೋಟದಿಂದ ಪಾರಾದರೂ, ಮತ್ತೂ ಬೆಂಬಿಡದ ಸಾವು!

ಶ್ರೀಲಂಕಾ, ಏ. 23, ನ್ಯೂಸ್ ಎಕ್ಸ್ ಪ್ರೆಸ್:  ದ್ವೀಪನಾಡು ಶ್ರೀಲಂಕಾದಲ್ಲಿ ಈಸ್ಟರ್​ ಸಂಡೇಯಂದು ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ರೆ ಬ್ರಿಟನ್​ ನಿವಾಸಿಗಳಾದ ಅಣ್ಣ-ತಂಗಿಯನ್ನು ವಿಧಿ ಬೆನ್ನು ಬಿಡದೇ ಬಲಿ ಪಡೆದಿದೆ. ಹೌದು, ರಕ್ತ ಹಂಚಿಕೊಂಡು ಹುಟ್ಟಿದ್ದ ಅಣ್ಣ-ತಂಗಿಯನ್ನು ವಿಧಿ ಬಲಿ ಪಡೆದಿದೆ. ಬ್ರಿಟನ್​ಗೆ ಸೇರಿದ ಡೆನಿಯಲ್​ (19) ಆತನ ಸಹೋದರಿ ಅಮಿಲಿ (15) ತನ್ನ ತಂದೆ-ತಾಯಿಯೊಂದಿಗೆ ಸೇರಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ಅವರು ಶ್ರೀಲಂಕಾ ಪ್ರವಾಸ ಮುಗಿಸಿಕೊಂಡು ಮತ್ತೆ ತಮ್ಮ ದೇಶಕ್ಕೆ ವಾಪಾಸ್​ ಹೋಗಬೇಕಾಗಿತ್ತು.  ಬ್ರಿಟನ್​ಗೆ ವಾಪಾಸ್​ ತೆರಳುವ ಮುನ್ನಾ ಅವರು ಟೆಬುಲ್​ ವನ್​ ಕಫೆಯಲ್ಲಿ ಉಪಾಹಾರ ಸೇವಿಸುತ್ತಿದ್ದರು. ಈ ವೇಳೆ ಪಕ್ಕದಲೇ ಬಾಂಬ್​ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಅಲ್ಲಿಂದ ಅವರು ನೇರ ಶಾಂಘ್ರಿಲಾ ಹೋಟೆಲ್​ಗೆ ತೆರಳಿದ್ದಾರೆ. ಆ ವೇಳೆ ಹೋಟೆಲ್​ನಲ್ಲಿ ಬಾಂಬ್​ ಸ್ಫೋಟಗೊಂಡಿದ್ದು, ಈ ದಾಳಿಯಲ್ಲಿ ಡೆನಿಯಲ್​ ಮತ್ತು ಅಮಿಲಿ ತೀವ್ರವಾಗಿ ಗಾಯಗೊಂಡಿದ್ದರು. ಡೆನಿಯಲ್​, ಅಮಿಲಿಯನ್ನು ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ತಿಳಿಸಿದ್ದಾರೆ. ಈ ಬಾಂಬ್​ಗಳ ದಾಳಿಯಲ್ಲಿ ಇಲ್ಲಿಯವರೆಗೆ 310 ಜನ ಮೃತಪಟ್ಟಿದ್ದು, ಇದರಲ್ಲಿ ಎಂಟು ಮಂದಿ ಬ್ರಿಟನ್​ ದೇಶದವರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos