ಡೆಂಗ್ಯೂ ಬಗ್ಗೆ ಜಾಗೃತಿ ಇರಲಿ

ಡೆಂಗ್ಯೂ ಬಗ್ಗೆ ಜಾಗೃತಿ ಇರಲಿ

ಬೆಂಗಳೂರು, ಸೆ. 11 : ಮಳೆ ಬರುತ್ತಲೇ ಇದ್ದರೆ, ಸೊಳ್ಳೆ ಕಾಡೋದು ತುಸು ತಪ್ಪುತ್ತೆ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ ಸೊಳ್ಳೆ ಕಾಟ. ಎಲ್ಲೆಲ್ಲಿ ಕೊಳಚೆ ನೀರಿರುತ್ತೋ ಅಲ್ಲೆಲ್ಲಾ ಬಿರು ಬೇಸಿಗೆಯಲ್ಲೂ ಸೊಳ್ಳೆ ಹುಟ್ಟುಕೊಳ್ಳುವುದರಲ್ಲಿ ಅನುಮಾನವೇ ಲ್ಲ. ಅದಕ್ಕೆ ಹೇಳುವುದು ಕೇವಲ ಒಂದು ಸೀಸನ್ಗೆ ಸೀಮಿತವಾದ ರೋಗ ಡೆಂಗ್ಯೂ ಅಲ್ಲ. ಬದಲಾಗಿ ವರ್ಷ ಪೂರ್ತಿ ಮನುಷ್ಯನನ್ನು ಹೈರಾಣವಾಗಿಸಬಹುದು.
ಈ ಸೊಳ್ಳೆಯಿಂದ ಕಾಡೋ ರೋಗಗಳು ಡೆಂಗ್ಯೂ, ಮಲೇರಿಯಾ…ಒಂದೆರಡಲ್ಲ. ಈ ರೋಗಗಳನ್ನು ತಕ್ಷಣವೇ ಪತ್ತೆ ಹಚ್ಚದೇ ಹೋದರೆ ಮಾರಾಣಾಂತಿಕವೂ ಆಗಬಹುದು. ಸೊಳ್ಳೆಯಿಂದ ರೋಗಗಳು ಹರಡುವುದು ಕಾಮನ್. ಆದರೂ, ಇದಕ್ಕಿನ್ನೂ ಇಂಥದ್ದೇ ಸೂಕ್ತ ಚಿಕಿತ್ಸೆ ಇಲ್ಲವೆನ್ನುವುದೂ ಆತಂಕದ ವಿಷಯ. ಅದಕ್ಕೆ ಮನೆ ಸುತ್ತಮುತ್ತ ಸೊಳ್ಳೆ ಹುಟ್ಟಿಕೊಳ್ಳದಂತೆ ಕಾಪಾಡಿಕೊಳ್ಳುವುದು ಅತ್ಯುತ್ತಮ ಮದ್ದು.

ಫ್ರೆಶ್ ನ್ಯೂಸ್

Latest Posts

Featured Videos