ಬೆಂಗಳೂರು: ನಟ ದರ್ಶನ್ ಅವರು ಕಾಟೇರ ಸಿನಿಮಾ 50 ದಿನ ಕಂಪ್ಲೀಟ್ ಆದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ರವರು ಉಮಾಪತಿ ಶ್ರೀನಿವಾಸರಾವರಿಗೆ ತಗಡು ಎಂಬ ಮಾತನ್ನು ಉಪಗೋಗಿಸಿದ್ದರು. ದರ್ಶನ್ ಅವರ ಹೇಳಿಕೆಗೆ ನಟನ ವಿರುದ್ಧ ಹಲವಾರು ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ನಟ ದರ್ಶನ್ ಅವರು ತಮ್ಮ ಪತ್ನಿ ಹಾಗೂ ಗೆಳೆಯರೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳದೆ ಆರಾಮವಾಗಿ ಪತ್ನಿಯೊಟ್ಟಿಗೆ ತಮ್ಮ ಆಪ್ತ ಗೆಳೆಯರೊಟ್ಟಿಗೆ ಸಖತ್ ಆಗಿ ಪಾರ್ಟಿ ಮಾಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಜೊತೆಗೆ ಡ್ಯಾನ್ಸ್ ಫ್ಲೋರ್ ನಲ್ಲಿ ದರ್ಶನ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಜಯಲಕ್ಷ್ಮಿ ಸಹ ಪತಿಯೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ. ದರ್ಶನ್ರ ಹಲವು ಗೆಳೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಎಲ್ಲರೂ ಸೇರಿ ಕುಣಿದು ಕುಪ್ಪಳಿಸಿರುವ ಜೊತೆಗೆ ಗುಂಪಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.