ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳ: ಸಚಿವ ಖಾದರ್ ಚಾಲನೆ

ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳ: ಸಚಿವ ಖಾದರ್ ಚಾಲನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.

ವ್ಯಸನ ಮುಕ್ತ ಬದುಕು-ಸ್ವಸ್ಥ ಸಮಾಜ ಎಂಬ ಆಶಯದೊಂದಿಗೆ ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜ.29, 30,
31ರಂದು  3 ದಿನಗಳ ಕಾಲ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ಸಮ್ಮೇಳನದ ಸಭಾಂಗಣದ ಮುಂಭಾಗ ಧ್ವಜಾರೋಹಣವನ್ನು ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಪರಿಷತ್‌ನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸಮ್ಮೇಳನದ ಧ್ವಜಾರೋಹಣವನ್ನು ಮನಾಪ ಮೇಯರ್ ಭಾಸ್ಕರ್ ಕೆ. ನೆರವೇರಿಸಿದರು.

ಈ ಸಂದರ್ಭದಲ್ಲಿ ಮೇಯರ್ ಭಾಸ್ಕರ ಕೆ., ಶಶಿಧರ್ ಹೆಗ್ಡೆ, ನಝೀರ್, ಶಹುಲ್ ಹಮೀದ್ ಸೇರಿದಂತೆ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos