ಎಐಸಿಆರ್ ಎ ಮತ್ತು ಈಸ್ಟ್ ವೆಸ್ಟ್ ಸಂಸ್ಥೆಗಳಿಂದ ವಿಶ್ವ ದಾಖಲೆ

ಎಐಸಿಆರ್ ಎ ಮತ್ತು ಈಸ್ಟ್ ವೆಸ್ಟ್ ಸಂಸ್ಥೆಗಳಿಂದ ವಿಶ್ವ ದಾಖಲೆ

ಬೆಂಗಳೂರು, ಆ. 31: ಆಲ್ ಇಂಡಿಯಾ ಕೌನ್ಸಿಲ್ ಫಾರ್ ರೊಬೋಟಿಕ್ಸ್ & ಆಟೋಮೇಶನ್ (ಎಐಸಿಆರ್‍ಎ) ಟೆಕ್ನೋಕ್ಸಿಯನ್ ಮತ್ತು ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್(ಇಡಬ್ಲ್ಯೂಜಿಐ) ಸಹಯೋಗದಲ್ಲಿ `ಅತಿ ದೊಡ್ಡ ರೊಬೋಟಿಕ್ ಕಿಟ್ ತಯಾರಿಕೆ ತರಬೇತಿ’(ವಿವಿಧ ಸ್ಥಳಗಳಲ್ಲಿ) ಯನ್ನು ಆಯೋಜಿಸುವ ಮೂಲಕ ವಿಶ್ವದಾಖಲೆ ಮಾಡಿವೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಇಡಬ್ಲ್ಯೂಜಿಐನ ಕ್ಯಾಂಪಸ್‍ನಲ್ಲಿ 2000 ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿ ಇಡೀ ದಿನ ರೋಬೋಟಿಕ್ಸ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಸುಸಿ ಗ್ಲೋಬಲ್ ರೀಸರ್ಚ್ ಸೆಂಟರ್‍ನ ಇನ್ವೆಂಟರ್ ವಿಜಯ್‍ಕುಮಾರ್ ಹೆಗ್ಡೆ ಅವರು ಉದ್ಘಾಟಿಸಿದರು. ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್‍ನ ಅಧ್ಯಕ್ಷ ಸಿ.ಎನ್.ರವಿಕಿರಣ್, ಎಐಸಿಆರ್‍ಎದ ರಾಜ್ಯ ಸಂಯೋಜಕ ಅನುಜ್‍ಜೈನ್ ಸೇರಿದಂತೆ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್ ಅವರು, ಇಂದಿನ ದಿನಮಾನಗಳಲ್ಲಿ ರೊಬೋಟಿಕ್ಸ್‍ನ ಅಗತ್ಯತೆ ಇದೆ. ಭವಿಷ್ಯದಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆಗಳು ಬರಲಿವೆ. ಈ ಅದ್ಭುತ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಕ್ಕೆ ನನಗೆ ಸಂತಸವಾಗುತ್ತಿದೆ. ವಿದ್ಯಾಥಿಗಳು ಹೊಸ ಹೊಸ ಕೌಶಲ್ಯಗಳನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಎಐಸಿಆರ್‍ಎ, ಇಡಬ್ಲ್ಯೂಜಿಐ ಮತ್ತು ಟೆಕ್ನೋಕ್ಸಿಯನ್ ಈ ಅತ್ಯುತ್ತಮವಾದ ಉಪಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್‍ನ ಅಧ್ಯಕ್ಷ ಸಿ.ಎನ್.ರವಿಕಿರಣ್ ಅವರು ಮಾತನಾಡಿ, ಇಂದು ಹೊಸ ಇತಿಹಾಸ ನಿರ್ಮಿಸಲಾಗಿದೆ ಮತ್ತು ನಮ್ಮ ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಗರದ ಏಕೈಕ ಸಂಸ್ಥೆಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಅಭಿವೃದ್ಧಿಪಡಿಸಲು ನಾವು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡುತ್ತೇವೆ. ಇಂತಹ ಇನ್ನೂ ಹತ್ತು ಹಲವು ಉಪಕ್ರಮಗಳು ನಮ್ಮ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಿದ್ದೇವೆ ಎಂದು ತಿಳಿಸಿದರು.

ಎಐಸಿಆರ್‍ಎದ ರಾಜ್ಯ ಸಂಯೋಜಕ ಅನುಜ್‍ಜೈನ್ ಮಾತನಾಡಿ, ರೊಬೋಟಿಕ್ ಉತ್ಸಾಹಿಗಳಿಗೆ ನೆರವಾಗಲೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರೊಬೋಟಿಕ್ಸ್‍ನ ಮೇಲೆ ವಿವಿಧ ಚಟುವಟಿಕೆಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸಹಕಾರಿಯಾಗಿದೆ. ಇದಲ್ಲದೇ, ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಮತ್ತು ಉತ್ಸಾಹವನ್ನು ಅನಾವರಣ ಮಾಡುವ ಮೂಲಕ ಅವರಲ್ಲಿ ರೊಬೋಟಿಕ್ಸ್ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ಈ ಉಪಕ್ರಮದ ಮೂಲಕ ಹುಟ್ಟಿಸಿದ್ದೇವೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos