‘ದಚ್ಚು’ಗೆ ಹಲವು ಬಿರುದು

‘ದಚ್ಚು’ಗೆ ಹಲವು ಬಿರುದು

ಬೆಂಗಳೂರು, ಜು. 8: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹತ್ತು ಹಲವಾರು ಬಿರುದು ನೀಡಿ ನೆಚ್ಚಿನ ನಟನ ಆರಾಧನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಸ್ಯಾಂಡಲ್ ವುಡ್ ನ ಏಕಚಕ್ರಾಧಿಪತಿ, ಸುಲ್ತಾನ್ ಹೀಗೆ ಸಾಕಷ್ಟು ಹೆಸರುಗಳಿಂದ ಪ್ರೀತಿಯ ದಚ್ಚು ಎಂದು ಕರೆಯುತ್ತಾರೆ. ಈ ಬಿರುದುಗಳ ಜೊತೆಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಅಭಿಮಾನಿಗಳು ಡಿ ಬಾಸ್ ಅವರನ್ನು ಎಷ್ಟು ಪ್ರೀತಿಸುತ್ತಾರೊ ಅಷ್ಟೆ ಪ್ರೀತಿ, ಗೌರವ ಅಭಿಮಾನಿಗಳಿಗೂ ನೀಡುತ್ತಾರೆ ಚಾಲೆಂಜಿಂಗ್ ಸ್ಟಾರ್.
ಎಲ್ಲಾ ಅಭಿಮಾನಿಗಳನ್ನು ಸಮಾನವಾಗಿ ಕಾಣುವ ದಚ್ಚು ಅಂದ್ರೆ ಅಭಿಮಾನಿಗಳೂ ಅಚ್ಚು ಮೆಚ್ಚು. ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದಿರುವ ದರ್ಶನ್ ಇತ್ತೀಚಿಗಷ್ಟೆ ಕುರುಕ್ಷೇತ್ರ ಚಿತ್ರದ ಆಡಿಯೋವನ್ನು ಅಭಿಮಾನಿಗಳ ಬಳಿ ರಿಲೀಸ್ ಮಾಡಿಸುವ ಮೂಲಕ ಅಭಿಮಾನಿಗಳ ಮೇಲಿನ ಪ್ರೀತಿ, ಗೌರವವನ್ನು ಮತ್ತೊಮ್ಮೆ ಸಬೀತು ಮಾಡಿದ್ರು.
ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಡಿ ಬಾಸ್ ಗೆ ಈಗ ಮತ್ತೊಂದು ಬಿರುದು ಸಿಕ್ಕಿದೆ ಅದೇ ‘ಸುಲ್ತಾನ್ ಆಫ್ ಸ್ಯಾಂಡಲ್ ವುಡ್’ ಈ ಬಿರುದನ್ನು ನೀಡಿದ್ದು ಅಭಿಮಾನಿಗಳಲ್ಲ. ಸ್ಯಾಂಡಲ್ ವುಡ್ ನ ಹಿರಿಯ ನಟಿ ತಾರಾ ಅನುರಾಧ. ಇತ್ತೀಚಿಗಷ್ಟೆ ‘ಸಿಂಗ’ ಚಿತ್ರದ ಆಡಿಯೋ ರಿಲೀಸ್ ಗೆ ದರ್ಶನ್ ಆಗಮಿಸಿದ್ರು. ಆ ಸಂದರ್ಭದಲ್ಲಿ ತಾರಾ ಅವರು ಈ ಮಾತನ್ನು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos