ಡಿ.ಕೆ. ಸುರೇಶ್ ಪರವಾಗಿ ಪ್ರಚಾರ ಮಾಡಿದ ಡಿ.ಕೆ. ಶಿವಕುಮಾರ್

ಡಿ.ಕೆ. ಸುರೇಶ್ ಪರವಾಗಿ ಪ್ರಚಾರ ಮಾಡಿದ ಡಿ.ಕೆ. ಶಿವಕುಮಾರ್

ರಾಮನಗರ: ಇಂದು ರಾಮನಗರದ ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಪ್ರಚಾರ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಮತಯಾಚಿಸಿದರು. ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಡಿ.ಕೆ. ಸುರೇಶ್ ಅವರ ಹೋರಾಟಕ್ಕೆ ನಿನ್ನೆ ಸುಪ್ರೀಂ ಕೋರ್ಟ್ ಜಯ ಕೊಟ್ಟಿದೆ. ಇದು ಡಿ.ಕೆ. ಸುರೇಶ್ ಅವರ ಹೋರಾಟದ ಫಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಡಿ.ಕೆ. ಸುರೇಶ್ ಅವರನ್ನು ಸಂಸದರಾಗಿ ಆಯ್ಕೆ ಮಾಡಿರುವ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.  ಕಮಲ ಕೆರೆದಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಬಂದ ಕೈ ಮೊದಲ ದಿನವೇ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಇಂತಹ ಯಾವುದಾದರೂ ಒಂದು ಕೆಲಸವನ್ನು ಕುಮಾರಸ್ವಾಮಿ, ಯಡಿಯೂರಪ್ಪ, ದೇವೇಗೌಡರು, ಮಂಜುನಾಥ್ ಅವರು ಮಾಡಿದ್ದಾರಾ? ಇವರೆಲ್ಲರೂ ಸೇರಿ ನಿಮಗೆ ಚೊಂಬು ಕೊಟ್ಟಿದ್ದಾರೆ.

ಡಿ.ಕೆ. ಸುರೇಶ್ ಹಳ್ಳಿ ಹಳ್ಳಿಗೆ ಬಂದು ಗ್ರಾಮ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಕುಮಾರಣ್ಣ, ದೇವೇಗೌಡರು ಯಾವುದಾದರೂ ಮನೆಗೆ ಸ್ಯಾನಿಟೈಸರ್, ಊಟ, ಆಹಾರ, ಔಷಧಿ ಕೊಟ್ಟಿದ್ದಾರಾ? ಅವರು ಯಾರ ಕಷ್ಟ ಸುಖ ಕೇಳಿದರಾ? ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್ ಗೆ ಬಲಿಯಾದಾಗ, ಬಿಜೆಪಿ ಸರ್ಕಾರ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ಕಳುಹಿಸದೆ, ಜೆಸಿಬಿಯಲ್ಲಿ ಹೂತುಹಾಕಿದರು. ಆದರೆ ಸುರೇಶ್ ಅವರು ಈ ಭಾಗದ ಅನಾಥ ಶವಗಳಿಗೆ ಹಿಂದೂ ಸಂಸ್ಕೃತಿಯ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು. ಇದು ಡಿ.ಕೆ. ಸುರೇಶ್ ಅವರ ಇತಿಹಾಸ. ಇದು ಮಾನವೀಯತೆ ವಿಚಾರ.

ಯಾವುದೋ ಕೆಲಸ ಮಾಡದ ಕಾರಣ ಕುಮಾರಸ್ವಾಮಿ ಈ ಜನರಿಗೆ ಹೆದರಿ ಅವರ ಬಾಮೈದನನ್ನು ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಿದ್ದಾರೆ. ಸೋಲಿನ ಭೀತಿಯಿಂದ ಸುರೇಶ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಿಸಿದ್ದಾರೆ. ನನ್ನನ್ನು ಜೈಲಿಗೆ ಹಾಕಿದರು. ನಿಮಗೆ ಯಾರಿಗಾದರೂ ನಾನು ತೊಂದರೆ ಮಾಡಿದ್ದೀನಾ? ಮೋಸ ಮಾಡಿದ್ದೀನಾ? ನನ್ನನ್ನು ಜೈಲಿಗೆ ಹಾಕಿ ಇವರೆಲ್ಲಾ ಏನೆಲ್ಲಾ ಮಾತನಾಡಿದರು. ಮಾತೆತ್ತಿದರೆ ಕುಮಾರಣ್ಣ ಕಲ್ಲು ಹೊಡೆದೆ ಎನ್ನುತ್ತಾರೆ.

ಉಳುವವನಿಗೆ ಭೂಮಿ, ಸೈಟು, ಮನೆ, ವೃದ್ಧರಿಗೆ ಪಂಚಣಿ, ಮಕ್ಕಳಿಗೆ ಬಿಸಿಯೂಟ, ಸ್ತ್ರೀಶಕ್ತಿ ಸಂಘ ಮಾಡಿದ್ದು, ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡಿದ್ದು, ಕೃಷಿ ಭಾಗ್ಯ, ಅನ್ನಭಾಗ್ಯ ಕೊಟ್ಟಿದ್ದು ನಾವು. ನಿಮ್ಮ ಸಂಬಂಧಿಕರು ಹಾಸನ, ಮಂಡ್ಯ, ತುಮಕೂರಿನ ಭಾಗದಲ್ಲಿ ಇದ್ದಾರೆ. ನೀವೆಲ್ಲರೂ ನೀವು ಯಾರನ್ನಾದರೂ ಕೇಳಿ, ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಒಬ್ಬೊಬ್ಬ ರೈತನಿಗೆ ಉಚಿತವಾಗಿ  ಟ್ರಾನ್ಸ್ ಫಾರ್ಮರ್ ಕೊಟ್ಟಿರುವ ಉದಾಹರಣೆ ಎಲ್ಲಾದರೂ ಇದ್ದರೆ ಅದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಮಾತ್ರ. ಇದು ಡಿ.ಕೆ. ಸುರೇಶ್ ಅವರ ಸಾಧನೆ.

 

ಫ್ರೆಶ್ ನ್ಯೂಸ್

Latest Posts

Featured Videos