ಡಿ ಬಾಸ್‌ ಗೆ ಸುತ್ತಿಕೊಂಡ ಮತ್ತೊಂದು ವಿವಾದ!

ಡಿ ಬಾಸ್‌ ಗೆ ಸುತ್ತಿಕೊಂಡ ಮತ್ತೊಂದು ವಿವಾದ!

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರ ನುಡಿ ಮಾತು ಹಾಗೂ ಅವರ ಪ್ರೀತಿಯ ಅಭಿಮಾನಿಗಳು ನೆನಪಿಗೆ ಬರುತ್ತಾರೆ. ಕಾಟೇರ ಸಿನಿಮಾ ಯಶಸ್ಸಿನ ಬೆನ್ನಲ್ಲಿ ನಟ ದರ್ಶನ್ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಕಾಟೇರ ಪಾರ್ಟಿ ವಿವಾದದ ಬಳಿಕ ನಟ ದರ್ಶನ್ ಗೆ ಹೊಸದೊಂದು ವಿವಾದ ಸುತ್ತಿಕೊಂಡಿದೆ. ನಿರ್ಮಾಪಕ ಉಮಾಪತಿ ವಿರುದ್ಧ ಹೇಳಿಕೆ ನೀಡಿದ ಡಿ ಬಾಸ್ ಗೆ ಸಂಕಷ್ಟ ಎದುರಾಗಿದೆ.

ಕಾಟೇರ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ನಟ ದರ್ಶನ್ ತೂಗುದೀಪ್ ವಿವಾದ ಸೃಷ್ಟಿಸಿದ್ದಾರೆ. ಬ್ಲಾಕ್‌ ಬಸ್ಟರ್‌  ರಾರ್ಬಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರನ್ನು ಟೀಕಿಸಲು ದರ್ಶನ್ ವೇದಿಕೆಗೆ ಬಂದಿದ್ದು ಅವರ ವಿರುದ್ಧ ನೀಡಿದ್ದ ಕೆಲವು ಹೇಳಿಕೆಗಳು ಬಾರಿ ವಿವಾದ ಸೃಷ್ಟಿಸಿದೆ.‌

ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆ ದೂರು ಸಲ್ಲಿಸಿದೆ, ಕರ್ನಾಟಕ ಪ್ರಜಾಪರ ವೇದಿಕೆ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ದರ್ಶನ್ ಅವರು ಗುಮ್ಮಿಸ್ಕೋತಿಯ ಅಂತ ಬೆದರಿಕೆ ಹಾಕಿದ್ದಾರೆ, ಇದಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.  ಅಲ್ಲದೆ ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳದೆ ಇದ್ದರೆ ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಾರಿ ಚರ್ಚೆಗಳಾಗುತ್ತಿದ್ದು ಫ್ಯಾನ್ಸ್ ವಾರ್ ಕೂಡ ಆರಂಭವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos