ಡಿಬಾಸ್ ಹುಟ್ಟುಹಬ್ಬ: ಡೆವಿಲ್‌ ಫಸ್ಟ್‌ ಲುಕ್‌ ರಿಲೀಸ್!

ಡಿಬಾಸ್ ಹುಟ್ಟುಹಬ್ಬ: ಡೆವಿಲ್‌ ಫಸ್ಟ್‌ ಲುಕ್‌ ರಿಲೀಸ್!

ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಅನೇಕ ಟಾಪ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ದರ್ಶನ್ ರವರಿಗೆ ಇಡೀ ಕರ್ನಾಟಕದಾದ್ಯಂತ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ, ಹಾಗೆ ದರ್ಶನ್ ರವರು ಕೂಡ ಅಭಿಮಾನಿಗಳನ್ನು ನನ್ನ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ ದರ್ಶನ್ ನಟನೆಯ ಕಾಟೇರ  ಸಿನಿಮಾ ಕರ್ನಾಟಕದ ಅತ್ಯಂತ  ಭರ್ಜರಿ ಯಶಸ್ಸನ್ನು ಕಂಡಿದೆ.

ಕೆಜಿಎಫ್, ಕಾಟೇರ ಸಿನಿಮಾಗಳು ಕೂಡ ಮಾಡಲಾರದ ರೆಕಾರ್ಡ್​ನ ಮಾಡಿರೋ ಕಾಟೇರ, ಫಾಸ್ಟೆಸ್ಟ್ 100 ಕ್ರೋರ್ ಬಾಕ್ಸ್ ಆಫೀಸ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡದಲ್ಲೇ ರಿಲೀಸ್ ಆದ ಈ ಚಿತ್ರ ಪರಭಾಷಿಗರನ್ನೂ ಸೆಳೆಯುವಂತೆ ಮಾಡಿದೆ. ಸದ್ಯ ಯಶಸ್ವಿ ಆರು ವಾರಗಳನ್ನ ಪೂರೈಸಿರೋ ಈ ಸಿನಿಮಾ ಬರೋಬ್ಬರಿ 250ಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ 50ನೇ ದಿನದತ್ತ ಮುನ್ನುಗ್ಗುತ್ತಿದೆ.

ಕೆಲವೇ ದಿನಗಳಲ್ಲಿ ದರ್ಶನ್ ರವರ ಹುಟ್ಟುಹಬ್ಬ ಇದರಿಂದ ಅಭಿಮಾನಿಗಳು ರಾಜದಾದ್ಯಂತ ಬಂದು ದರ್ಶನ್ ರವರನ್ನು ಭೇಟಿ ಮಾಡಿ ಅವರಿಗೆ ಶುಭ ಕೋರುತ್ತಾರೆ, ಅವರ ಬರ್ತಡೆ ದಿನದಂದು ಅವರ ಮುಂದಿನ ಸಿನಿಮಾ ಡೆವಿಲ್ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos