ಸಿಲಿಂಡರ್ ಸ್ಫೋಟ

ಸಿಲಿಂಡರ್ ಸ್ಫೋಟ

ಬಳ್ಳಾರಿ, ಜ. 6: ಸಿಲಿಂಡರ್ ಸ್ಫೋಟಗೊಂಡ ಹಿನ್ನಲೆ ತಾಯಿ ಮಗಳು ಸಜೀವ ದಹನವಾದ ಘಟನೆ ಇಂದು ಬೆಳಿಗ್ಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆಯಲ್ಲಿ ನಡೆದಿದೆ.
ತಾಯಿ ಪಾರ್ವತಮ್ಮ , ಮಗಳು ಹುಲಿಗೆಮ್ಮ ಮೃತಪಟ್ಟವರು. ಇಂದು ಬೆಳಿಗ್ಗೆ ಮನೆಯಲ್ಲಿ ಅಡುಗೆ ಮಾಡುವ ವೇಳೆ ಅನಿಲ ಸೋರಿಕೆಯಾದ ಹಿನ್ನಲೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಪರಿಣಾಮ ತಾಯಿ ಮಗಳು ಸಜೀವವಾಗಿ ಸುಟ್ಟು ಹೋಗಿದ್ದು, ಮನೆಯಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿದೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos