ಚಂಡಮಾರುತ: ಕರ್ನಾಟಕ-ತಮಿಳುನಾಡು ನಡುವಿನ ರೈಲು ಸಂಚಾರ ಸ್ಥಗಿತ!

ಚಂಡಮಾರುತ: ಕರ್ನಾಟಕ-ತಮಿಳುನಾಡು ನಡುವಿನ ರೈಲು ಸಂಚಾರ ಸ್ಥಗಿತ!

ಬೆಂಗಳೂರು: ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ ಎಲ್ಲಾ ರೈಲುಗಳು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರದಿಂದ ತಮಿಳುನಾಡಿನ ರಸ್ತೆಗಳು, ರೈಲು ನಿಲ್ದಾಣಗಳು ಸಂಪೂರ್ಣ ಜಲಾವೃತಗೊಂಡಿವೆ ಆದಕಾರಣ ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಮಿಚಾಂಗ್ ಚಂಡಮಾರುತವು ತಮಿಳುನಾಡು-ಕರ್ನಾಟಕದ ನಡುವೆ ಚಲಿಸುವ 40ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಚಂಡಮಾರುತದ ಪರಿಣಾಮ ದಕ್ಷಿಣ ರೈಲ್ವೆ ಒಂಬತ್ತು ರೈಲುಗಳನ್ನು ರದ್ದುಗೊಳಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 20607/20608); ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 12007/12008); ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 22625/22626); ಡಾ ಎಂಜಿಆರ್ ಚೆನ್ನೈ-ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 12639/12640) ಮತ್ತು ಕೆಎಸ್ಆರ್ ಬೆಂಗಳೂರು-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ. 12608). ಕೆಎಸ್‌ಆರ್ ಬೆಂಗಳೂರು-ನ್ಯೂ ಟಿನ್‌ಸುಕಿಯಾ (ಟ್ರೇನ್ ಸಂಖ್ಯೆ 22501) ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಅಗರ್ತಲಾ (ರೈಲು ಸಂಖ್ಯೆ 12503) ರದ್ದುಗೊಂಡ ರೈಲುಗಳಾಗಿವೆ.

 

ಫ್ರೆಶ್ ನ್ಯೂಸ್

Latest Posts

Featured Videos