ಚಲನಚಿತ್ರದ ದೃಶ್ಯದಂತೆ ಕರೆನ್ಸಿ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದೆ!

ಚಲನಚಿತ್ರದ ದೃಶ್ಯದಂತೆ ಕರೆನ್ಸಿ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದೆ!

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಹೊರಗಡೆ ಹೋಗಿ ಶಾಪಿಂಗ್ ಮಾಡಲು ಅವರಿಗೆ ಸಮಯವಿರುವುದರಿಂದ ಅದರಿಂದ ಆನ್ಲೈನ್ ಹೆಚ್ಚು ಶಾಪಿಂಗ್ ಮಾಡುತ್ತಿರುತ್ತಾರೆ. ಇದರಿಂದ ಅವರ ಸಮಯವೂ ಸಹ ಉಳಿಯುತ್ತದೆ ಹಾಗೂ ಆನೇಕ ತರಹದ ಆರ್ಫರ್ ಗಳು ಸಿಗುತ್ತದೆ.
ವಾಣಿಜ್ಯ ನಗರಿ ಮುಂಬೈನ ಗೇಟ್ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಇಂದು ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಚಲನಚಿತ್ರದ ದೃಶ್ಯದಂತೆ ಕರೆನ್ಸಿ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದ್ದರೆ, ಜನರು ಕುತೂಹಲ ಭರಿತವಾಗಿ ನೋಡತೊಡಗಿದರು. ಇದೊಂದು ರೀತಿಯ ಉತ್ಸಾಹ ಮತ್ತು ವಿಸ್ಮಯದ ವಾತಾವರಣಕ್ಕೆ ಕಾರಣವಾಯಿತು. ಅಲ್ಲದೇ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಫ್ಲಿಪ್ ಕಾರ್ಟ್, ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ. ಅಂದಹಾಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯಾನ್ ಡೇಸ್ ಸೇಲ್ ಅಭಿಯಾನ ಅಕ್ಟೋಬರ್ 8 ರಿಂದ 15ರವರೆಗೆ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos