ಉತ್ತಮ ಆರೋಗ್ಯಕ್ಕೆ ಸೌತೆಕಾಯಿ

ಉತ್ತಮ ಆರೋಗ್ಯಕ್ಕೆ ಸೌತೆಕಾಯಿ

ಬೆಂಗಳೂರು, ಡಿ. 03: ದಿನನಿತ್ಯವೂ ಸೌತೆಕಾಯಿ ತಿನ್ನುವುದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು ಎಂದು ಹಲವರು ಹೇಳುತ್ತಲೇ ಬರುತ್ತಿದ್ದಾರೆ. ಕೆಲವೊಂದು ಕಾಯಿಲೆಗಳ ತಡೆಯಲು ಹಾಗೂ ಅದನ್ನು ನಿವಾರಿಸಲು ಇದು ತುಂಬಾ ಪರಿಣಾಮಕಾರಿ.

ತೂಕ ಕಡಿಮೆ: ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೀರಿಕೊಳ್ಳುವ ನಾರಿನಾಂಶ ಹೆಚ್ಚಿದ್ದು, ಇದು ತೂಕ ಇಳಿಸುವವರಿಗೆ ತುಂಬಾ ಪರಿಣಾಮಕಾರಿಯಾಗಿದೆ.

ಕೀಲುಗಳ ಆರೋಗ್ಯ: ಸೌತೆ ಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ.

ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಪರಿಣಾಮಕಾರಿ.

ಮಲಬದ್ದತೆ: ಬೇಸಿಗೆಯಲ್ಲಿ ಮಲಬದ್ದತೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಊರಿಯೂತ ಕಂಡು ಬಂದರೆ ಸೌತೆಕಾಯಿ ಸೇವಿಸಿ

ಬೆಳಿಗ್ಗೆ ಎದ್ದಾಗ ತಲೆನೋವಿದ್ದರೆ ಆಲಸ್ಯ ಕಂಡು ಬರುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೌತೆಕಾಯಿ ತಿನ್ನಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶವನ್ನು ಸೌತೆಕಾಯಿ ಒದಗಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos