ಸೌತೆಕಾಯಿ ದಿನನಿತ್ಯ ಬಳಕೆ ಅಗತ್ಯ

ಸೌತೆಕಾಯಿ ದಿನನಿತ್ಯ ಬಳಕೆ ಅಗತ್ಯ

ಸೌತೆಕಾಯಿಯಲ್ಲಿ 45 ಕ್ಯಾಲರಿ, 11 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 2 ಗ್ರಾಂ ಪ್ರೋಟೀನ್, 2 ಗ್ರಾಂ ನಾರಿನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ಮ್ಯಾಂಗನೀಸ್ ಇದೆ. ಸೌತೆಕಾಯಿ ದಿನನಿತ್ಯ ಸೇವಿಸಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಯಿರಿ.

ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟ ವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನ ವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ. ಒಂದು ವೇಳೆ ಸೌತೆಕಾಯಿಯು ನಿಮ್ಮ ಇಷ್ಟದ ತಿನಿಸು ಅಲ್ಲವಾದರೆ, ನೀವು ನೀವು ಸೌತೆಕಾಯಿಯ ತುಣುಕುಗಳನ್ನು ಕಡ್ಡಿಯೊಂದಕ್ಕೆ ಸಿಕ್ಕಿಸಿ, ಅವುಗಳನ್ನು ಕಡಿಮೆ ಕೊಬ್ಬಿನಾಂಶವುಳ್ಳ, ಕೆನೆಯುಳ್ಳ ಮೊಸರಿನಲ್ಲಿ ಅದ್ದಿಯೂ ಸಹ ಸೇವಿಸಬಹುದು.

ಸೌತೆಕಾಯಿಯ ತುಣುಕು ಗಳನ್ನು ಜಗಿಯುವುದರಿಂದ ದವಡೆಗಳಿಗೆ ಉತ್ತಮ ವ್ಯಾಯಾಮ ವಾದಂತಾಗುತ್ತದೆ, ಜೊತೆಗೆ ಅದರ ನಾರಿನಂಶವು ಜೀರ್ಣ ಕ್ರಿಯೆಯಲ್ಲಿ ಬಹುವಾಗಿ ಸಹಕರಿಸುತ್ತದೆ. ಸೌತೆಕಾಯಿಯ ಪ್ರತಿದಿನದ ಬಳಕೆಯು ಬಹುಕಾಲದ ಮಲಬದ್ಧತೆಗೆ ಒಂದು ಸಾಧನ ಎಂದು ಪರಿಗಣಿಸಬಹುದು.

ಸೌತೆಕಾಯಿ ಯಲ್ಲಿ ಉರಿಯೂತ ಶಮನಕಾರಿ ಫ್ಲಾವೊನೊಲ್ ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನರಕೋಶಗಳ ಸಂರ್ಪಕವನ್ನು ಹೆಚ್ಚಿಸುವುದು. ಇದೇ ಕಾರಣಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸಿ. ಇದು ಕೇವಲ ನೆನಪಿನ ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲದೆ ನರಕೋಶಗಳಿಗೆ ವಯಸ್ಸಾಗುವುದುನ್ನು ತಡೆಯುವುದು.

ಸೌತೆ ಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ರಸವನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಿದರೆ, ಅದು ಶರೀರದ ಯುರಿಕ್ ಆಮ್ಲಗಳ ಮಟ್ಟವನ್ನು ತಗ್ಗಿಸುವುದರ ಮೂಲಕ ಸಂದುಗಳು (ಕಾಲುಗಳ) ಮತ್ತು ಕೀಲುಗಳ ಉರಿಯೂತ ಮತ್ತು ನೋವಿನಿಂದ ವಿಮುಕ್ತಿಗೊಳಿಸುತ್ತದೆ.

ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತ ದೊತ್ತಡವನ್ನು ನಿಯಂತ್ರಿಸುತ್ತದೆ. ಸೌತೆಕಾಯಿಯು, ಮೇದೋಜೀರಕ ಗ್ರಂಥಿಯ ಕೋಶಗಳು ಇನ್ಸುಲಿನ್ ಅನ್ನು ಉತ್ಪಾದಿಸಲು ಅಗತ್ಯವಾದ ಹಾರ್ಮೋನ್ಅನ್ನು ಹೊಂದಿದ್ದು, ಈ ಇನ್ಸುಲಿನ್, ಮಧುಮೇಹ ರೋಗಿ ಗಳಿಗೆ ಲಾಭದಾಯಕವೆಂದು ಜನಜನಿತವಾಗಿದೆ.

ಸೌತೆ ಕಾಯಿಯಲ್ಲಿ ಸ್ಟೀರೋಲ್ಸ್ ಎಂಬ ಸಂಯುಕ್ತ ವಸ್ತುವೊಂದಿದ್ದು, ಇದು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸೌತೆಕಾಯಿಗಳು ಬಹಳಷ್ಟು ನಾರು, ಪೊಟ್ಯಾಸಿಯಂ, ಮತ್ತು ಮೆಗ್ನೀಷಿಯಂ ಅನ್ನು ಒಳಗೊಂಡಿವೆ. ಈ ಪೋಷಕಾಂಶಗಳು ರಕ್ತದೊತ್ತ ಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವತ್ತ ಕಾರ್ಯ ನಿರ್ವಹಿಸುತ್ತವೆ. ಈ ಕಾರಣದಿಂದಲೇ, ಸೌತೆಕಾಯಿಯು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡಕ್ಕೂ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಸೌತೆ ಕಾಯಿಯಲ್ಲಿ ಇರುವಂತಹ ಶೇ.95ರಷ್ಟು ನೀರಿನಾಂಶವು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದು ಕೋಶಗಳಿಗೆ ಪೋಷಣೆ ನೀಡುವುದು ಮತ್ತು ಒಳಗಿನ ಕ್ರಿಯೆಗಳಿಗೆ ತುಂಬಾ ನೆರವಾಗುವುದು. ನೋವು ಹಾಗೂ ಸೋಂಕು ನಿವಾರಣೆಗೆ ಸೌತೆಕಾಯಿ ಜ್ಯೂಸ್ ತುಂಬಾ ಪರಿಣಾಮಕಾರಿ. ದೇಹದೊಳಗಡೆ ಉರಿಯೂತ ಉಂಟಾದಾಗ ಸೌತೆಕಾಯಿಯಲ್ಲಿರುವ ಉರಿಯೂತ ಶಮನಕಾರಿ ಗುಣವು ಕಿಣ್ವಗಳನ್ನು ಬಿಡುಗಡೆ ಮಾಡಿ ಉರಿಯೂತ ಕಡಿಮೆ ಮಾಡುವುದು.

ಫ್ರೆಶ್ ನ್ಯೂಸ್

Latest Posts

Featured Videos