ಕಾಗೆ ಜ್ವರದ ಆತಂಕ, ಕೇರಳದಲ್ಲಿ ಮೊದಲ ಬಲಿ

ಕಾಗೆ ಜ್ವರದ ಆತಂಕ, ಕೇರಳದಲ್ಲಿ ಮೊದಲ ಬಲಿ

ಕೇರಳ, ಮಾ. 20, ನ್ಯೂಸ್ ಎಕ್ಸ್ ಪ್ರೆಸ್:  ಕೋಳಿ ಜ್ವರ, ಹಂದಿ ಜ್ವರದಿಂದ ದೇಶಾದ್ಯಂತ ಹಲವು ಜನರು ಮೃತಪಟ್ಟಿದ್ದಾರೆ. ಇದೀಗ  ಮತ್ತೆ ಅದೇ ಮಾದರಿಯ ಕಾಗೆ ಜ್ವರ ಎನ್ನುವ ಹೊಸ ರೋಗ ಕಂಡುಬಂದಿದೆ.

ಈ ಕಾಗೆ ಜ್ವರಕ್ಕೆ ಕೇರಳದಲ್ಲಿ 6 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಇದು ಮಾರಣಾಂತಿಕ ರೋಗವೆನಿಸಿಕೊಂಡಿದೆ. ಕಾಗೆ ಸೇರಿದಂತೆ ಪಕ್ಷಿಗಳು ಹಾಗೂ ಸೊಳ್ಳೆಗಳಿಂದ ಹರಡುವ ಈ ಕಾಯಿಲೆಗೆ ಈಗ ಆತಂಕ ಸೃಷ್ಟಿಯಾಗಿದೆ.

ವೆಸ್ಟ್ ನೈಲ್ ವೈರಸ್ ಎಂಬುದು ಫ್ಲೆವಿ ವೈರಸ್ ವರ್ಗಕ್ಕೆ ಸೇರಿದ ವೈರಸ್, ಈ ವೈರಸ್ ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡು ಬರುತ್ತದೆ. ಈ ವೈರಾಣುಗಳು ಕಾಗೆ ಜಾತಿಗೆ ಸೇರಿದ ಪಕ್ಷಿಗಳಿಂದ ಹರಡುವುದರಿಂದ ಕಾಗೆ ಜ್ವರ ಎಂದೂ ಕರೆಯಲಾಗುತ್ತದೆ.

ಈ ಸೋಂಕು ತಗುಲಿದ ವ್ಯಕ್ತಿಗೆ ಸೋಂಕು ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಸೋಂಕಿನಿಂದ ಉಂಟಾಗುವ ಜ್ವರ, ತಲೆನೋವು, ನರಗಳ ಊದಿಕೊಳ್ಳುವಿಕೆಯಂತಹ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿ ಹತೋಟಿಗೆ ತರಬೇಕಾಗುತ್ತದೆ.

ರೋಗದ ಗುಣಲಕ್ಷಣಗಳು ಮೊದಲೇ ಗೊತ್ತಾದರೆ ಮಾತ್ರ ಬದುಕುಳಿಯುವ ಸಾಧ್ಯತೆ ಇರುತ್ತದೆ. 1937 ಉಗಾಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ವೆಸ್ಟ್ ನೈಲ್ ವೈರಾಣು 1999ರಿಂದ ಉತ್ತರ ಅಮೆರಿಕದಲ್ಲಿ ತೀವ್ರವಾಗಿ ಕಾಣಿಸಿಕೊಂಡಿತ್ತು. ಇಂತಹ ವೈರಾಣು ದಾಳಿಗೆ ದೇಶದಲ್ಲೇ ಮೊದಲ ಬಲಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos