ರಾಜ್ಯದಲ್ಲಿ ‘ಕಾಗೆ ಜ್ವರ’ ಭೀತಿ: ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ

ರಾಜ್ಯದಲ್ಲಿ ‘ಕಾಗೆ ಜ್ವರ’ ಭೀತಿ: ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ

ಬೆಂಗಳೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಕೇರಳದಲ್ಲಿ ಪಕ್ಷಿಗಳಿಂದ ಹರಡುವ ‘ವೆಸ್ಟ್ ನೈಲ್ ಫೀವರ್’ ಜ್ವರ ಕಾಣಿಸಿಕೊಂಡಿರುವ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಕೇರಳ ಗಡಿಯಲ್ಲಿನ ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ವೆಸ್ಟ್ ನೈಲ್ ಫೀವರ್ ಕಾಗೆ ಸೇರಿದಂತೆ ಇತರೆ ಚಿಕ್ಕ ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಪಕ್ಷಿಯಿಂದ ಮತ್ತೊಂದು ಪಕ್ಷಿಗೆ ಅಥವಾ ಮನುಷ್ಯನಿಗೆ ಸೊಳ್ಳೆ ಹಾಗೂ ಸೋಂಕಿತ ಪಕ್ಷಿಯ ಕಡಿತದಿಂದ ಹರಡುತ್ತದೆ. ಕೇರಳ ಗಡಿಯಲ್ಲಿರುವ ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸ್ಥಳೀಯ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಈ ಸೋಂಕು ತಗುಲಿದವರಿಗೆ ಜ್ವರ, ತಲೆನೋವು, ತುರಿಕೆ, ಮೈ-ಕೈ ನೋವು, ವಾಂತಿ ಶುರುವಾಗುತ್ತದೆ. ಅಲ್ಲದೆ ಈ ಕಾಯಿಲೆಗೆ ಔಷಧವಿಲ್ಲ, ಆದ್ರೆ ಆಯಾಯ ಗುಣಲಕ್ಷಣಗಳನ್ನು ಆಧಾರಿಸಿ ಚಿಕಿತ್ಸೆ ನೀಡಲಾಗುತ್ತದೆ.

ಸದ್ಯ ಕರ್ನಾಟಕದಲ್ಲಿ ಈ ರೋಗ ಪತ್ತೆಯಾಗಿಲ್ಲ. ಆದ್ರೂ ಆರೋಗ್ಯ ಇಲಾಖೆ ಈ ರೋಗವನ್ನು ತಡೆಗಟ್ಟುವ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos