ನೀರಿಲ್ಲದೆ ಒಣಗುತ್ತಿರು ಬೆಳೆಗಳು! ರೈತರು ಕಂಗಾಲು

ನೀರಿಲ್ಲದೆ ಒಣಗುತ್ತಿರು ಬೆಳೆಗಳು! ರೈತರು ಕಂಗಾಲು

ಶಿವಮೊಗ್ಗ: ರಾಜ್ಯದಲ್ಲಿ ಅಂದುಕೊಂಡಷ್ಟು ಮಳೆಯಾಗದಿರುವ ಕಾರಣ ರಾಜ್ಯದಲ್ಲಿ ನೀರಿಗೆ ಅಭಾವ ಉಂಟಾಗಿದೆ ಇದರಿಂದಾಗಿ ರೈತರೆಲ್ಲ ಕಂಗಾಲಾಗಿದ್ದಾರೆ ಹಾಗೂ ಜಲಾಶಯಗಳೆಲ್ಲ ಬರೆದಾಗಿದೆ ಇದರಿಂದ ನಾವೇ ಆತಂಕ ಗೀಡಾಗಿದ್ದೀರಿ. ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ರೈತರು ಹಗಲು ರಾತ್ರಿ ಸಾಲ ಸೂಲ ಮಾಡಿ ಬೆಳೆದ ಮೆಕ್ಕೆಜೋಳ ಕೈಕೊಟ್ಟಿದೆ. ವಾಡಿಕೆ ಮಳೆಗಿಂತ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ಇದರಿಂದ ಒಂದೆಡೆ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿವೆ. ಇನ್ನೂ ಕೆಲ ರೈತರು ಬೆಳೆ ಉಳಿಸಿಕೊಳ್ಳಲು ಭಗತೀಥ ಯತ್ನಕ್ಕೆ ಮುಂದಾಗಿದ್ದಾರೆ. ಶಿವಮೊಗ್ಗಾ ತಾಲೂಕಿನ ಶ್ರೀರಾಮ ಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 300 ರಿಂದ 400 ಎಕೆರೆ ಮೆಕ್ಕೆ ಜೋಳ ಬೆಳೆದಿದ್ದಾಳೆ. ಮಳೆ ಇಲ್ಲದೆ ಮೆಕ್ಕೆಜೋಳ ಆರಂಭದ ಹಂತದಲ್ಲಿ ಒಣಗಿ ಹೋಗಿದೆ.
ಎಕರೆಗೆ 25 ರಿಂದ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರ ಮಳೆ ಇಲ್ಲದೇ ಕಂಗಾಲಾಗಿದ್ಧಾನೆ. ಬೆಳೆ ಹಾನಿ ಆಗಿದ್ದರಿಂದ ರೈತನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಇನ್ನೂ ಕೆಲ ರೈತರು ಟ್ಯಾಂಟರ್ ಮೂಲಕ ಮೆಕ್ಕೆ ಜೋಳಕ್ಕೆ ನೀರು ಹಾಯಿಸುವ ಮೂಲಕ ಅದನ್ನು ಬಚಾವ್ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಪ್ರಯೋಜನವಾಗೋದಿಲ್ಲ. ಹೀಗಾಗಿ ಈ ಸಲ ಗಣೇಶ ಹಬ್ಬಕ್ಕೆ ನಮಗೆ ಸಂಭ್ರಮ ಇಲ್ಲ ಅನ್ನೋದು ರೈತರ ಅಳಲು.

ಫ್ರೆಶ್ ನ್ಯೂಸ್

Latest Posts

Featured Videos