ಆದಿವಾಸಿ ಮಹಿಳೆಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

ಆದಿವಾಸಿ ಮಹಿಳೆಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

ಮಿಡ್ನಾಪುರ್, ಮಾ. 18, ನ್ಯೂಸ್ ಎಕ್ಸ್ ಪ್ರೆಸ್: ಗ್ರಾಮದಲ್ಲಿ ಮಾಟಗಾತಿಯೆಂಬ ಶಂಕೆಯ ಮೇಲೆ ಆದಿವಾಸಿ ಮಹಿಳೆಯನ್ನು ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಈಶ್ವರಪುರ್ ಎಂಬ ಗ್ರಾಮದಲ್ಲಿ ಸ್ಥಳಿಯರು ಥಳಿಸಿ ಹತ್ಯೆಗೈದಿದ್ದಾರೆ.

ಮೃತ ಮಹಿಳೆಯನ್ನು 51 ವರ್ಷದ ಅರ್ದಮನಿ ಹಂಸದಾ ಎಂದು ಗುರುತಿಸಲಾಗಿದೆ.

ಆಕೆ ಮತ್ತು ಗ್ರಾಮದ ಇತರ 4 ಜನ ಮಹಿಳೆಯರಿಗೆ ಮಾಟಗಾತಿಯರು ಎಂಬ ಹಣೆಪಟ್ಟಿಯನ್ನು ಸ್ವಘೋಷಿತ ಮಾಟಗಾತಿ ಶ್ಯಾಮಲಿ ಮಂಡಿ ಎಂಬಾಕೆ ಆಯೋಜಿಸಿದ್ದ ಪಂಚಾಯತ್ ಸಭೆಯಲ್ಲಿ ಘೋಷಿಸಿದ ನಂತರ ಈ ಘಟನೆ ನಡೆದಿದೆ.

ಉಳಿದ 4 ಮಹಿಳೆಯರಿಗೂ ಈ ಗ್ರಾಮಸ್ಥರು ಥಳಿಸಿದ್ದು ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ 5 ಜನ ಮಹಿಳೆಯರನ್ನೂ ಪಂಚಾಯತ್ ನಡೆದ ಸ್ಥಳಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಲಾಗಿತ್ತೆನ್ನಲಾಗಿದೆ. ಆರಂಭದಲ್ಲಿ ಪೊಲೀಸರು ಗ್ರಾಮಕ್ಕೆ ಧಾವಿಸಿದಾಗ ಗ್ರಾಮಸ್ಥರು ಅವರನ್ನು ತಡೆದ ನಂತರ ಹೆಚ್ಚಿನ ಪೊಲೀಸ್ ಪಡೆಗಳು ಅಲ್ಲಿಗಾಗಮಿಸಿ ಉಳಿದ 4 ಜನ ಮಹಿಳೆಯರನ್ನು ರಕ್ಷಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos