ನ್ಯೂಜಿಲ್ಯಾಂಡ್‍ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ನ್ಯೂಜಿಲ್ಯಾಂಡ್‍ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಹ್ಯಾಮಿಲ್ಟನ್: ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ಟೀಂಇಂಡಿಯಾ ಇಂದಿಲ್ಲಿ ನಡೆದ 4ನೆ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಡ್ ಬೋಲ್ಟ್ ಹಾಗೂ ಅರೆಕಾಲಿಕ ಬೌಲರ್ ಹ್ಯಾಂಡ್ಸ್‍ಕೋಮ್‍ರ ಮಾರಕ ದಾಳಿಯಿಂದಾಗಿ ಹೀನಾಯ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಪ್ರವಾಸಿ ಭಾರತ ತಂಡವನ್ನು ಬ್ಯಾಟಿಂಗ್ ಆಮಂತ್ರಿಸಿದ ಕೇನ್‍ವಿಲಿಯಮ್ಸ್‍ರ ಕಾರ್ಯತಂತ್ರ ಫಲ ನೀಡುವ ಮೂಲಕ ರೋಹಿತ್ ಪಡೆ 92 ರನ್‍ಗಳಿಗೆ ಸರ್ವಪತನವಾಯಿತು.

ಸರಣಿಯ ಮೂರು ಪಂದ್ಯಗಳಲ್ಲೂ ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿದ್ದ ರೋಹಿತ್‍ಶರ್ಮಾ ಹಾಗೂ ಶಿಖರ್‍ಧವನ್ ಇಂದು ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟಲು ನಿಧಾನಗತಿಯ ಆಟಕ್ಕೆ ಮುಂದಾಗಿದ್ದರಾದರೂ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 13 ರನ್ ಗಳಿಸಿದ ಧವನ್ ವೇಗಿ ಟ್ರೆಂಟ್ ಬೋಲ್ಟ್‍ನ ಚೆಂಡಿನ ಗತಿಯನ್ನು ಅರಿಯದೆ ಎಲ್‍ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ನಿರಾಸೆ ಅನುಭವಿಸಿದರು.

ನಂತರ ತನ್ನ ಬೌಲಿಂಗ್ ಮೊನಚಿನಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (7 ರನ್), ಶುಭಮನ್‍ಗಿಲ್(9 ರನ್), ಕೇದಾರ್‍ಜಾಧವ್( 1 ರನ್), ಹಾರ್ದಿಕ್ ಪಾಂಡ್ಯಾ(16 ರನ್)ಗೆ ಪೆವಿಲಿಯನ್ ಹಾದಿಯನ್ನು ತೋರಿಸಿದರು.

ಟ್ರೆಂಡ್ ಬೋಲ್ಡ್ ಉತ್ತಮ ಸಾಥ್ ನೀಡಿದ ಅರೆಕಾಲಿಕ ಬೌಲರ್ ಹ್ಯಾಂಡ್ಸ್‍ಕೋಮ್, ಅನುಭವಿ ಬ್ಯಾಟ್ಸ್‍ಮನ್‍ಗಳಾದ ಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್‍ರನ್ನು ಖಾತೆ ತೆರೆಯುವ ಮುನ್ನವೇ ತಮ್ಮ ಬೌಲಿಂಗ್ ಮೋಡಿಗೆ ತಲೆದೂಗುವಂತೆ ಮಾಡಿದರೆ, 15 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಕುಲದೀಪ್ ಯಾದವ್‍ಗೂ ಪೆವಿಲಿಯನ್ ಹಾದಿ ತೋರಿಸಿದರು.ವೇಗಿ ಖಲೀಲ್ ಅಹಮದ್ ಅವರು ನಿಶಾನ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಮಾಡಿ ಭಾರತದ ಇನ್ನಿಂಗ್ಸ್‍ಗೆ ಮಂಗಳ ಹಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos