ಕ್ರಿಕೆಟ್ ಗೆ ವಿದಾಯ ಹೇಳಿದ ವೇಣುಗೋಪಾಲ್

ಕ್ರಿಕೆಟ್ ಗೆ ವಿದಾಯ ಹೇಳಿದ ವೇಣುಗೋಪಾಲ್

ಹೈದರಾಬಾದ್, ಜು. 31 : ಆಂಧ್ರ ಪ್ರದೇಶ ರಣಜಿ ತಂಡದ ಮಾಜಿ ನಾಯಕ, ಭಾರತ ತಂಡದ ಪರವೂ ಆಡಿದ್ದ ವೇಣುಗೋಪಾಲ್ ರಾವ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. 2005ರಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಅವರು, ಭಾರತ ಪರ ಅವರು 16 ಏಕದಿನ ಪಂದ್ಯಗಳನ್ನು ಆಡಿದ್ದರು. 1 ಅರ್ಧಶತಕದೊಂದಿಗೆ 218 ರನ್ ಗಳಿಸಿದ್ದರು. 37 ವರ್ಷದ ವೇಣುಗೋಪಾಲ್ ರಾವ್ ಇದೀಗ ನಿವೃತ್ತಿ ಘೋಷಿಸಿದ್ದಾರೆ.
2006ರಲ್ಲಿ ತಮ್ಮ ಕೊನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ಡೆವಿಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. 2006ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದ ವೇಣುಗೋಪಾಲ್ ರಾವ್ 2015ರ ವರೆಗೆ ದೇಸಿ ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದರು. 4 ವರ್ಷ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡೋ ಉತ್ಸಾಹದಲ್ಲಿದ್ದರು. ಆದರೆ ಮತ್ತೆ ತಂಡಕ್ಕೆ ಸೇರಲು ಸಾಧ್ಯವಾಗಿಲ್ಲ. ಇದೀಗ ವಿದಾಯ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos