ವಿರಾಟ್ ರೂಪ ಪ್ರದರ್ಶಿಸಿದರೆ ವಿಶ್ವಕಪ್ ಭಾರತಕ್ಕೆ: ಪಾಟಿಂಗ್

ವಿರಾಟ್ ರೂಪ ಪ್ರದರ್ಶಿಸಿದರೆ ವಿಶ್ವಕಪ್ ಭಾರತಕ್ಕೆ: ಪಾಟಿಂಗ್

ನವದೆಹಲಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್:  ಟೀಮ್ ಇಂಡಿಯಾ ನಾಯಕ  ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮೆನ್ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಇದೇ ರೀತಿ ತಮ್ಮ ಪ್ರಾಬಲ್ಯ ಮುಂದುವರಿಸಿದ್ದೇ ಆದರೆ ವಿಶ್ವಕಪ್ ಅನ್ನು ಭಾರತ ತನ್ನ ಮೂಡಿಗೇರಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮತ್ತು ದೆಹಲಿ ಕ್ಯಾಪಿಟಲ್ಸ್ ತರಬೇತುದಾರ ರಿಕಿ ಪಾಟಿಂಗ್ ಹೇಳಿರುವ ಭವಿಷ್ಯವಿದು.

ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾಗಿದೆ ಎಂದು ರಿಕಿ ವಿಶ್ಲೇಷಿಸಿದರು. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಈ 4 ತಂಡಗಳು ಸೆಮಿಫೈನೆಲ್ಸ್ ಪ್ರವೇಶಿಸಲಿದೆ ಎಂದು ಅವರು ಭವಿಷ್ಯ ನುಡಿದರು.

ವಿರಾಟ್ ಕೊಹ್ಲಿ ಒಬ್ಬ ಅದ್ಭುತ ಆಟಗಾರ. ಅವರ ಇತ್ತೀಚಿನ ಆಕ್ರಮಣಕಾರಿ ಬ್ಯಾಟಿಂಗ್ ವೈಖರಿಯನ್ನು ನಾನು ಗಮನಿಸುತ್ತಲೇ ಬಂದಿದ್ದೇನೆ. ಕೆಲವೊಮ್ಮೆ ಅವರನ್ನು ನನ್ನ ಸಾಮಥ್ರ್ಯದೊಂದಿಗೆ ಹೊಲಿಕೆ ಮಾಡಿಕೊಂಡಿದ್ದೇನೆ.

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇವರಿಬ್ಬರ ಸಾಧನೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಕಿ ಪಾಟಿಂಗ್, ಸಚಿನ್ ಕ್ರಿಕೆಟ್ ಲೋಕದ ದಂತಕಥೆ ಅವರ ಸಾಧನೆಗಳು ಮಹತ್ವದ್ದು . ಅದೇ ರೀತಿ ವಿರಾಟ್ ಸಹ ಅದ್ಭುತ ಬ್ಯಾಟ್ಸ್ಮೆನ್ ಅವರು ಕೂಡ ಉತ್ತಮ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos