ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

ನವದೆಹಲಿ ,ಅ. 19: ಚುನಾವಣಾ ಪ್ರಚಾರದ ನಡುವೆಯೂ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ ರಾಜಕೀಯ ಚಿಂತೆಗಳನ್ನು ಮರೆತು ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡಿದ್ದಾರೆ. ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ತೆರಳಿದ್ದ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ದೆಹಲಿಗೆ ತೆರಳದ ಕಾರಣ ಅವರು ಹರ್ಯಾಣದಲ್ಲೇ ಇದ್ದು, ಕ್ರಿಕೆಟ್ ಆಡಿದರು! ದೆಹಲಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಕಾರಣ ಹರ್ಯಾಣದಲ್ಲೇ ವಾಪಸ್ ಲ್ಯಾಂಡ್ ಆಯಿತು. ಹರ್ಯಾಣದಿಂದ 100 ಕಿಮೀ ದೂರದಲ್ಲಿರುವ ರೆವಾರಿಯಲ್ಲಿ ಅವರು ಕೆಲಹೊತ್ತು ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು. ಹರ್ಯಾಣದ ಮಹೇಂದ್ರಗಢಕ್ಕೆ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.

ಆದರೆ ಹವಮಾನ ಏರುಪೇರಿನಿಂದ ದೆಹಲಿಗೆ ತೆರಳಲು ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ಆದಕಾರಣ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಯಾಗುವವರೆಗೂ ರಾಹುಲ್ ಗಾಂಧಿ ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ. ರಾಹುಲ್ ಗಾಂಧಿ ಸಖತ್ ಆಗಿ ಕ್ರಿಕೆಟ್ ಆಡಿದ್ದು, ಅಲ್ಲಿರುವವರು ರಾಹುಲ್ ಗಾಂಧಿಯ ಆಟ ನೋಡಿ ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos