ಸಿಆರ್ ಪಿಎಫ್ ಯೋಧ ಸಾವು

ಸಿಆರ್ ಪಿಎಫ್ ಯೋಧ ಸಾವು

ದಾಂತೇವಾಡ (ಛತ್ತೀಸ್ ಗಢ): ಐಇಡಿ ಸ್ಫೋಟಗೊಂಡ ಪರಿಣಾಮ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಯೋಧರೊಬ್ಬರು ಹುತಾತ್ಮರಾದ ಘಟನೆ ಬುಧವಾರ ಬೆಳಗ್ಗೆ ಛತ್ತೀಸ್ ಗಢದ ದಾಂತೇವಾಡ ಸಮೀಪದ ಬೋಡ್ಲಿ ಎಂಬಲ್ಲಿ ನಡೆದಿದೆ.
ಐಇಡಿ ಸ್ಫೋಟದಲ್ಲಿ ಹುತಾತ್ಮರಾದ ಯೋಧ ಬಿಹಾರದ ನವಾಡಾ ನಿವಾಸಿ ರೋಷನ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಸಿಆರ್ ಪಿಎಫ್ ನ 195 ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ದಾಂತೇವಾಡ-ಜಗ್ ದಾಲ್ಪುರ್ ಗಡಿ ಸಮೀಪದ ಸಿಆರ್ ಪಿಎಫ್ ಕ್ಯಾಂಪ್ ಬಳಿ ಸ್ಫೋಟ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಪ್ರೆಶ್ಶರ್(ಒತ್ತಡ)ದ ತಂತ್ರ ಉಪಯೋಗಿಸಿ ಐಇಡಿ ಸ್ಫೋಟಗೊಳಿಸಿರುವುದಾಗಿ ವರದಿ ವಿವರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos