ತ್ರಿ ವಿಕ್ರಮದಲ್ಲಿ ‘ಕ್ರೇಜಿ’ ಸನ್ ಹವಾ!

ತ್ರಿ ವಿಕ್ರಮದಲ್ಲಿ ‘ಕ್ರೇಜಿ’ ಸನ್ ಹವಾ!

ಬೆಂಗಳೂರು. ಆ. 12 : ಕ್ರೇಜಿಸ್ಟಾರ್ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಇದೀಗ ‘ತ್ರಿವಿಕ್ರಮ’ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ತಮ್ಮದು ‘ಹೈ ವೋಲ್ಟೇಜ್ ಲವ್ ಸ್ಟೋರಿ..’ ಎಂದು ಹೇಳಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಇನ್ನು ಫಸ್ಟ್ ಲುಕ್ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ‘ತ್ರಿವಿಕ್ರಮ’ ಚಿತ್ರವು ಇದೀಗ ಟೀಸರ್ ಗಳ ಮೂಲಕವೂ ಅಬ್ಬರಿಸುತ್ತಿದೆ. ಇನ್ನು ರವಿಚಂದ್ರನ್ ಸಿನಿಮಾಗಳೆಂದರೆ, ಪ್ರೀತಿ, ಪ್ರೇಮ, ರೊಮ್ಯಾನ್ಸ್ ಎಲ್ಲವೂ ಇರುತ್ತದೆ. ಇದೀಗ ಮಗನ ಚಿತ್ರದಲ್ಲೂ ಅಂಥದ್ದೇ ಖದರ್, ಲುಕ್ ಇರುವ ಟೀಸರ್ ಗಳು ಹವಾ ಎಬ್ಬಿಸುತ್ತಿವೆ.
ಈ ಟೀಸರ್ ಗಳಲ್ಲಿ ವಿಕ್ರಮ್ ಮಾಸ್ ಹಾಗೂ ಕ್ಲಾಸ್ ಲುಕ್ ನಲ್ಲಿ ದರ್ಶನ ಕೊಟ್ಟಿದ್ದಾರೆ. ಜೊತೆಗೆ ದಗದಗ ಉರಿಯುವ ಬೆಂಕಿಯಂತ ಬೈಕ್ ಏರಿ, ಡ್ಯಾನ್ಸ್ ಗೂ ಸೈ, ರೊಮ್ಯಾನ್ಸ್ ಗೂ ಜೈ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos