ದೇಶದಲ್ಲಿ ಯುದ್ಧ ವಾತಾವರಣ ಸೃಷ್ಟಿಸಿ ತುರ್ತು ಪರಿಸ್ಥಿತಿ ಹೇರಲು ಬಿಜೆಪಿ-ಆರೆಸ್ಸೆಸ್ ಹುನ್ನಾರ: ಸಿಪಿಎಂ

ದೇಶದಲ್ಲಿ ಯುದ್ಧ ವಾತಾವರಣ ಸೃಷ್ಟಿಸಿ ತುರ್ತು ಪರಿಸ್ಥಿತಿ ಹೇರಲು ಬಿಜೆಪಿ-ಆರೆಸ್ಸೆಸ್ ಹುನ್ನಾರ: ಸಿಪಿಎಂ

ಪ್ರಚಾರಕ್ಕಾಗಿ ಬಿಜೆಪಿ ಸೇನೆಯ ಕಾರ್ಯಾಚರಣೆಯನ್ನು ಬಳಸಿಕೊಳ್ಳುತ್ತಿದೆ

ತಿರುವನಂತಪುರಂ: ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಯುದ್ಧದ ವಾತಾವರಣ ಸೃಷ್ಟಿಸಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಯತ್ನಿಸುತ್ತಿದೆ ಎಂದು ಸಿಪಿಎಂ ನಾಯಕ ಕೊಡಿಯೆರೆ ಬಾಲಕೃಷ್ಣನ್ ಆರೋಪಿಸಿದ್ದಾರೆ.

ಜನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸದ್ಯ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿಗೆ ನಷ್ಟವಾಗಲಿದೆ ಎಂದು ಆರೆಸ್ಸೆಸ್ ಮೊದಲೇ ತಿಳಿದುಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣೆ ದಿನಾಂಕ ಘೋಷಿಸುವ ಮೊದಲೇ ಆರೆಸ್ಸೆಸ್ ಯುದ್ಧದ ವಾತಾವರಣ ಸೃಷ್ಟಿ ಮಾಡಿ ಚುನಾವಣೆಯನ್ನು ಹಾಳುಗೆಡುವ ಷಡ್ಯಂತ್ರ ಹೂಡಿದೆ ಎಂದು ಟೀಕಿಸಿದ್ದಾರೆ.

ನಿನ್ನೆ ನಡೆದ ವಾಯುಸೇನಾ ಕಾರ್ಯಾಚರಣೆಯನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಪಾಕಿಸ್ತಾನದ ವಿರುದ್ಧ ದ್ವೇಷವನ್ನು ಹಬ್ಬಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದೆ. ದೇಶದ ಮುಸ್ಲಿಮರ ವಿರುದ್ಧವೂ ಕೂಡ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆರೆಸ್ಸೆಸ್ ದೇಶದಲ್ಲಿ ಕೋಮು ಧ್ರುವೀಕರಣವನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಬಿಜೆಪಿ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos