ಕೊವಿಡ್ ಪ್ರಕರಣ ದಾಖಲು

  • In State
  • August 4, 2020
  • 151 Views
ಕೊವಿಡ್ ಪ್ರಕರಣ ದಾಖಲು

ಹೆಬ್ಬೂರು:ಇಲ್ಲಿನ ಜನತಾ ಕಾಲೋನಿಯ ೫೫ ವರ್ಷದ ವ್ಯಕ್ತಿ ಹೃದಯ ಸಂಬAಧಿ ಕಾಯಿಲೆಗೆ ಚಿಕಿತ್ಸೆ ಪಡೆಯಲು ಇಲ್ಲಿನ ಪ್ರಾಥಮಿಕ ಆರೋಗ್ಯಕ್ಕೆ ಬಂದಾಗ, ವೈದ್ಯರ ನಿರ್ದೇಶನದಂತೆ ಕೊವಿಡ್    ಪರೀಕ್ಷೆ ಮಾಡಿಸಿದಾಗ, ಪಾಸಿಟಿವ್ ವರದಿ ಬಂದಿದ್ದರಿAದ; ಅವರನ್ನ ತುಮಕೂರಿನ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ೯ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ೨ ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದ್ದು, ಮನೆಯ ಅಕ್ಕ-ಪಕ್ಕ ಸೀಲ್‌ಡೌನ್ ಮಾಡಿ, ಕಂಟೈನ್ ಪ್ರದೇಶವನ್ನಾಗಿ ಘೋಷಿಸಲಾಯಿತು. ಹೆಬ್ಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕೊವಿಡ್ ಪ್ರಕರಣ ವರದಿಯಾಗಿದೆ.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕರಾದ ಶ್ರೀ ಜವರಯ್ಯ, ಕಿರಿಯ ಆರೋಗ್ಯ ಸಹಾಯಕಿ ಅಂಜಲಾದೇವಿ, ನಂದಿನಿ, ಚೈತ್ರ  ಗ್ರಾಮ ಲೆಕ್ಕಾಧಿಕಾರಿ ಕೆ.ಹೊನ್ನಪ್ಪ, ಪೋಲಿಸ್ ಇಲಾಖೆಯ ಕೀರ್ತಿಪ್ರಸಾದ್.ಎಮ್.ಎಚ್ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೃಷ್ಣಪ್ಪ, ಸಿಬ್ಬಂದಿಗಳು ಆಶಾ ಕಾರ್ಯಕರ್ತೆ ಮಂಜುಳಾ  ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos