ಕೋಚ್ ಆಯ್ಕೆಗೆ ವಿರಾಟ್ ಸಹಾಯ ಬೇಡ

 ಕೋಚ್ ಆಯ್ಕೆಗೆ ವಿರಾಟ್ ಸಹಾಯ ಬೇಡ

ಮುಂಬೈ, ಜು.19 : ಟೀಂ ಇಂಡಿಯಾ ನಾಯಕ  ಹುದ್ದೆ ಎಷ್ಟು ಪವರ್ ಫುಲ್ ಎಂದರೆ ತಂಡದ ಕೋಚ್ ಆಯ್ಕೆ ಕೂಡಾ ಹೆಸರಿಗೆ ಮಾತ್ರ ಆಯ್ಕೆ ಸಮಿತಿ ಮಾಡಿದರೂ, ಅಂತಿಮ ನಾಯಕನ ಅಭಿಪ್ರಾಯವೇ ಮುಖ್ಯ.  ಈ ಬಾರಿ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡುವಾಗ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಕೇಳುವ ಸಾಧ್ಯತೆಯಿಲ್ಲ ಎಂದು  ಬಿಸಿಸಿಐ ಮೂಲಗಳು ಹೇಳಿವೆ.

ಕಳೆದ ಬಾರಿ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಮಾಡಲೂ ಕೊಹ್ಲಿ ಒತ್ತಾಯವೇ ಕಾರಣ ಎನ್ನಲಾಗಿದೆ. ಆದರೆ ಈ ಬಾರಿ ಕಪಿಲ್ ದೇವ್ ನೇತೃತ್ವದ ಸಮಿತಿ ಕೋಚ್ ಆಯ್ಕೆ ಮಾಡುತ್ತಿದ್ದು, ಅವರು ಕೊಹ್ಲಿ ಅಭಿಪ್ರಾಯ ಕೇಳುವ ಸಾಧ್ಯತೆಯಿಲ್ಲ.ಅಷ್ಟೇ ಅಲ್ಲ, ಕೋಚ್ ನ ಸಹಾಯಕ ಸಿಬ್ಬಂದಿಗಳನ್ನೂ ಈ ಸಮಿತಿಯೇ ನೇಮಕ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos