‘ಆದಿತ್ಯ L-1’ ಉಡಾವಣೆಗೆ ಕ್ಷಣಗಣನೆ

‘ಆದಿತ್ಯ L-1’ ಉಡಾವಣೆಗೆ ಕ್ಷಣಗಣನೆ

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿರುವುದರಿಂದ. ಭಾರತವು ಹೆಮ್ಮೆಯ ಪಡುವಂತಹ ವಿಷಯವಾಗಿದೆ. ಈಗ ಇಸ್ರೋ ಸಂಸ್ಥೆ ಮತ್ತೊಂದು ದೊಡ್ಡ ಮಟ್ಟದ ಕಾರ್ಯಚರಣೆಗೆ ಮುಂದಾಗಿದೆ. ಅದು ಸೂರ್ಯನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್‌-1 ನೌಕೆಯನ್ನು ಇಂದು ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ.
ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ಸೂರ್ಯಯಾನಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್ 1 ಉಡಾವಣೆಯಾಗಲಿದೆ. ಇಸ್ರೋ ಆದಿತ್ಯ ಎಲ್‌-1 ನೌಕೆಯನ್ನ ಭೂಮಿಯಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದ ಲಾಂಗ್ರೇಜ್‌ ಪಾಯಿಂಟ್‌ಗೆ ತಲುಪಿ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ.
ಆದಿತ್ಯ L-1 ಉಡಾವಣೆ ಡಿಜಿಟಲ್ ಲೈವ್ ವೀಕ್ಷಿಸಿ. PSLV-C57, ಆದಿತ್ಯ ಎಲ್-1 ನೌಕೆಯನ್ನ ನಭಕ್ಕೆ ಹೊತ್ತೊಯ್ಯಲಿದೆ. ಆದಿತ್ಯ ಎಲ್‌1, ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್. ಆದಿತ್ಯ ಎಲ್‌1, ನಿಗದಿತ ಗುರಿ ತಲುಪುವುದಕ್ಕೆ ಬರೋಬ್ಬರಿ 125 ದಿನ ಹಿಡಿಯುತ್ತೆ. ಅಂದ್ರೆ ನಾಲ್ಕು ತಿಂಗಳು. ನಾಲ್ಕು ತಿಂಗಳ ಬಳಿಕ ಎಲ್‌1 ಪಾಯಿಂಟ್ ತಲುಪುತ್ತೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಈ ಲ್ಯಾಗ್ರೇಂಜ್ ಪಾಯಿಂಟ್ 1 ಅಥವಾ ಎಲ್1 ಪಾಯಿಂಟ್ ಬಳಿಯೇ ಸುತ್ತುತ್ತಾ 5ವರ್ಷ ಸೂರ್ಯನ ಅಧ್ಯಯನ ಮಾಡಲಿದೆ. ಹೀಗಾಗಿಯೇ ಈ ನೌಕೆಗೆ ಆದಿತ್ಯ ಎಲ್1 ಅಂತಾ ನಾಮಕರಣ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos