ಇಂಡಿಯಾ ಕೋಚ್ ಯಾರು ?

ಇಂಡಿಯಾ ಕೋಚ್  ಯಾರು ?

ನವದೆಹಲಿ, ಜು. 17 : ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋತು ತವರಿಗೆ ಮರಳಿರುವ ಭಾರತ ಕ್ರಿಕೆಟ್ ತಂಡದಲ್ಲಿ ಕೆಲ ಬದಲಾವಣೆಗಳಾಗುವುದು ಖಚಿತ. ತಂಡದ ಕೋಚಿಂಗ್ ಸಿಬ್ಬಂದಿ ಹೊಸದಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತ ತಂಡದ ಕೋಚ್ ಆಗುವವರು 60 ವರ್ಷಕ್ಕಿಂತ ಕೆಳಪಟ್ಟವರಾಗಿರಬೇಕು ಹಾಗೂ ಕನಿಷ್ಠ 2 ವರ್ಷ ಅಂತಾರಾಷ್ಟ್ರೀಯ ತಂಡದ ಕೋಚ್ ಆಗಿದ್ದ ಅನುಭವವಿರಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ.
ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ರ ಗುತ್ತಿಗೆ ಅಂತ್ಯಗೊಂಡಿತು. ಬಿಸಿಸಿಐ, ವೆಸ್ಟ್ಇಂಡೀಸ್ ಪ್ರವಾಸದ ಮುಂದುವರಿಸಲು ನಿರ್ಧರಿಸಿದ್ದು, ಗುತ್ತಿಗೆ ಅವಧಿ 45 ದಿನಗಳಿಗೆ ವಿಸ್ತರಿಸಿದೆ. ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ಆ ವೇಳೆಗೆ ಹೊಸ ಕೋಚ್ ನೇಮಿಸಲು ಬಿಸಿಸಿಐ ನಿರ್ಧರಿಸಿದೆ.
ಅರ್ಜಿ ಸಲ್ಲಿಸುವವರಿಗೆ ಜು.30ರ ಸಂಜೆ 5 ಗಂಟೆಯ ಗಡುವು ನೀಡಿದೆ. ಜತೆಗೆ ಕೆಲ ಮಾನದಂಡಗಳನ್ನು ವಿಧಿಸಿದೆ. 2017ರಲ್ಲಿ ರವಿಶಾಸ್ತ್ರಿಯನ್ನು ಕೋಚ್ ಆಗಿ ನೇಮಕ ಮಾಡುವ ಮುನ್ನ ಬಿಸಿಸಿಐ 9 ಅಂಶವುಳ್ಳ ಅರ್ಹತಾ ಮಾನದಂಡಗಳನ್ನು ಪ್ರಕಟಿಸಿತ್ತು. ಅವುಗಳಲ್ಲಿ ಕೆಲವಕ್ಕೆ ಸ್ಪಷ್ಟತೆ ಇರಲಿಲ್ಲ. ಆದರೆ ಈ ಬಾರಿ ಎಲ್ಲಾ ಕೋಚ್ಗಳ ಹುದ್ದೆಗೆ ಕೇವಲ 3 ಮಾನದಂಡಗಳನ್ನು ವಿಧಿಸಿದೆ.
‘ ಶಾಸ್ತ್ರಿ, ಭರತ್ ಅರುಣ್, ಬಾಂಗರ್ ಹಾಗೂ ಶ್ರೀಧರ್ ಭಾರತ ತಂಡದ ಕೋಚ್ಗಳಾಗಿ ಮುಂದುವರಿಯುವ ಇಚ್ಛೆ ಹೊಂದಿದ್ದರೆ, ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ನಡೆಸುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಹಾಗೂ ಟ್ರೈನರ್ ಶಂಕರ್ ಬಾಸು ರಾಜೀನಾಮೆ ನೀಡಿದ್ದು, ಆ ಹುದ್ದೆಗಳಿಗೆ ಹೊಸದಾಗಿ ನೇಮಕವಾಗಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos