ದುಬಾರಿ ಹೋಟೆಲ್ ಆಯ್ತು, ಈಗ ದುಬಾರಿ ಹಾಸ್ಟೆಲ್…

ದುಬಾರಿ ಹೋಟೆಲ್ ಆಯ್ತು, ಈಗ ದುಬಾರಿ ಹಾಸ್ಟೆಲ್…

ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಹೊಸ ಶೈಕ್ಷಣಿಕ ವರ್ಷ ಶುರುವಾಗ್ತಿದೆ. ವಿದ್ಯಾರ್ಥಿಗಳು ಇದಕ್ಕೆ ತಯಾರಿ ಶುರು ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮನೆಯಿಂದ ದೂರದಲ್ಲಿರುವ ಹಾಸ್ಟೆಲ್ ನಲ್ಲಿ ಉಳಿದುಕೊಳ್ತಾರೆ. ಹಾಸ್ಟೆಲ್ ಹುಡುಕುವುದು ಸುಲಭದ ಕೆಲಸವಲ್ಲ. ಎಲ್ಲ ವ್ಯವಸ್ಥೆಯಿರುವ ಹಾಸ್ಟೆಲ್ ಸಿಗುವುದು ಬಹಳ ಕಡಿಮೆ. ಆದ್ರೆ ಸ್ಟಾರ್ಟ್ ಅಪ್ ಕಂಪನಿಯೊಂದು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದೆ. ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ಟಾರ್ಟ್ ಅಪ್ ಕಂಪನಿಯೊಂದು ಹೈಟೆಕ್ ಹಾಸ್ಟೆಲ್ ನಿರ್ಮಾಣ ಮಾಡಿದೆ. ಹೈಟೆಕ್ ಸೌಲಭ್ಯದ ಹಾಸ್ಟೆಲ್ ನಲ್ಲಿ 200 ಬೆಡ್ ಗಳಿವೆ. ಆಹಾರ ಸೇರಿದಂತ ಎಲ್ಲ ವ್ಯವಸ್ಥೆ ಇಲ್ಲಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೋಣೆ ಆಯ್ದುಕೊಳ್ಳಬಹುದು.ತಿಂಗಳಿಗೆ 7000 ದಿಂದ 25 ಸಾವಿರದವರೆಗೆ ತಿಂಗಳ ಬಾಡಿಗೆ ನೀಡಬೇಕು.

 

ಕಂಪನಿಯ ವೆಬ್ಸೈಟ್ www.stanzaliving.com ನಲ್ಲಿ ಹಾಸ್ಟೆಲ್ ಬಗ್ಗೆ ಮಾಹಿತಿ ಸಿಗಲಿದೆ. ಈ ವೆಬ್ಸೈಟ್ ಓಪನ್ ಮಾಡಿದ ನಂತ್ರ ವಿದ್ಯಾರ್ಥಿಗಳು ಹೆಸರು ಹಾಗೂ ಕಾಲೇಜ್ ಹೆಸರನ್ನು ಹಾಕಬೇಕು. ಆಗ ಇನ್ನೊಂದು ಪುಟ ತೆರೆದುಕೊಳ್ಳಲಿದೆ. ಅದ್ರಲ್ಲಿ ಹಾಸ್ಟೆಲ್ ಇರುವ ಜಾಗ, ರೂಂ ವಿವರ ಬರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos