ಸರ್ಕಾರಿ ಅಧಿಕಾರಿ ಮಂಜುನಾಥ್‌ ಭ್ರಷ್ಟಾಚಾರ!

ಸರ್ಕಾರಿ ಅಧಿಕಾರಿ ಮಂಜುನಾಥ್‌ ಭ್ರಷ್ಟಾಚಾರ!

ಬೆಂಗಳೂರು: ಕಾನೂನುಬಾಹಿರವಾಗಿ ಹೆಲ್ತ್ ಸೂಪರ್‌ವೈಸರ್‌ಗಳ ಹುದ್ದೆ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿ, ಉಪ ಆಯುಕ್ತರ ಮಂಜುನಾಥ್‌ರವರು ಭ್ರಷ್ಟಾಚಾರವೆಸಗಿ, ಅವ್ಯವಹಾರ ನಡೆಸುತ್ತಿದ್ದಾರೆ.

ಅದರಂತೆ ಒಟ್ಟು 36 ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಬಿಬಿಎಂಪಿ ಕೇಂದ್ರ ಕಚೇರಿ, ಉಪ ಆಯುಕ್ತರು (ಆಡಳಿತ) ಮಂಜುನಾಥ್‌ರವರು ಮುಂಬಡ್ತಿ ಪಡೆದಿರುವ ಪ್ರತಿ ಉದ್ಯೋಗಿಯಿಂದ ರೂ. 5ಲಕ್ಷಗಳಂತೆ ಲಂಚ ಪಡೆದು ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದುವ ಅಧಿಕಾರಿಗಳ ಸ್ಥಳಕ್ಕೆ ಮುಂಗಡವಾಗಿ ಅವರ ಬೇಡಿಕೆಯ ಸ್ಥಳಗಳಿಗೆ ನಿಯೋಜಿಸುತ್ತೇನೆಂಬ ಆಸೆಯನ್ನು ತೋರಿಸಿ ಕಾನೂನು ಬಾಹಿರವಾಗಿ ಆದೇಶವನ್ನು ನೀಡಿರುತ್ತಾರೆ.

ಇದೇ ತರಹ ಕಚೇರಿಯ 8 ವಲಯಗಳಲ್ಲಿ ವರ್ಗಾವಣೆ ಹಾಗೂ ಮುಂಬಡ್ತಿ ಸಂಬಂದಪಟ್ಟಂತೆ ಪಾಲಿಕೆಯ ಅಧಿಕಾರಗಳ ಜೇಬಿಗೆ ಕತ್ತರಿ ಹಾಕಿ, ಒತ್ತಡ ಹೇರಿ ಹಣವನ್ನು ಪಡೆದು ಕೊಳುತ್ತಿದ್ದಾರೆ.

ಹಣ ನೀಡದಂತಹ ಅಧಿಕಾರಿಗಳಿಗೆ ಕಿರುಕುಳ ನೀಡಿ, ಸ್ಥಳ ನಿಯುಕ್ತಿಗೊಳಿಸದೇ, ಸತಾಯಿಸುತ್ತಿರುವ ಬಗ್ಗೆಯೂ ದೂರುಗಳು ಬಂದಿದೆ.

ಆದುದರಿಂದ ಈ ಕೂಡಲೇ ಉಪ ಆಯುಕ್ತ ಮಂಜುನಾಥ್‌ರವರ ವಿರುದ್ಧ ಸಂಪೂರ್ಣ ತನಿಖೆಯನ್ನು ಮಾಡಿ ಅವರನ್ನು ಅಮಾನತ್ತುಗೊಳಿಸಿ, ಕಾನೂನುಬಾಹಿರವಾಗಿ ಆದೇಶಗೊಂಡಿರುವ ಪತ್ರ ಸಂಖ್ಯೆ ಬಿ12(4)/ಪಿಆರ್/210/2023-24, ದಿ: 19.02.2024 ಅನ್ನು ವಜಾಗೊಳಿಸುವಂತೆ ಕೋರುತ್ತೇವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಡಳಿತ ಅಧಿಕಾರಿಗಳಾದಂತಹ ರಾಕೇಶ ಸಿಂಗ್ ಅವರ ಆಪ್ತ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಅದೇ ರೀತಿಯಲ್ಲಿ ಪಾರದರ್ಶಕವಾಗಿ ಹಾಗು ಉದ್ಯೋಗಿಯ ಅರ್ಹತೆಯ ಮೇರೆಗೆ ಸ್ಥಳ ಮರು ನಿಯೋಜಿಸಿ, ನೌಕರರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಲಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಲಾಗುತ್ತದೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos