ಕೊರೊನಾ ಗೈಡ್‌ ಲೈನ್ಸ್!

ಕೊರೊನಾ ಗೈಡ್‌ ಲೈನ್ಸ್!

ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸಾರ್ವಜನಿಕರು ಪಾಲಿಸಬೇಕಾದ ಕ್ರಮಗಳನ್ನು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದೆ. ತಮಿಳುನಾಡು  ಹಾಗೂ ಕೇರಳ ರಾಜ್ಯದಲ್ಲಿ ಕೋವಿಡ್ 19ನ ಉಪತಳಿ JN.1 ವರದಿಯಾಗಿರುವುದು. ಚಳಿಗಾಲದ ಹವಾಮಾನ, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರೋದರಿಂದ ಕೋವಿಡ್‌-19 ರಾಜ್ಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿರುವ ಸಲಹೆಗಳನ್ನು ಸಾರ್ವಜನಿಕರಿ ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.

1. 60 ವರ್ಷ ಮೇಲ್ಪಟ್ಟ ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆ ಇರುವವರು ಮಾಸ್ಕ್ ಧರಿಸಬೇಕು

2.ಗರ್ಭಿಣಿಯರು ಮತ್ತು ಬಾಣಂತಿಯರು ಮಾಸ್ಕ್ ಧರಿಸಬೇಕು

3.ಜನಸಂದಣಿ ಇರುವ ಪ್ರದೇಶ ಹಾಗೂ ಶುದ್ಧ ಗಾಳಿಯ ಕೊರೆತೆ ಇರುವ ಜಾಗಗಳಿಂದ ದೂರ ಉಳಿಯಲು ಸಲಹೆ

4.ಜ್ವರ ಕೆಮ್ಮು, ಶೀಥ, ಸುರಿಯುವ ಮೂಗಿನ ಲಕ್ಷಣ ಇರುವವರು ವೈದ್ಯಕೀಯ ತಪಾಸಣೆ ಮಾಡಸಬೇಕು

5.ಕೊರೊನಾ ಗುಣ ಲಕ್ಷಣ ಇರುವವರು ಮಾಸ್ಕ್ ಧರಿಸಬೇಕು

6.ಶುಧ್ಧತೆ ಕಾಪಾಡುವುದರ ಜೊತೆ ಕೈತೊಳೆದುಕೊಳ್ಳಬೇಕು

7.ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಮನೆಯಲ್ಲಿರಲು ಸೂಚನೆ

8.ಜ್ವರ ಇದ್ದರೆ ಬೇರೆಯವರ ಜೊತೆ ಸಂಪರ್ಕ ಹೊಂದದಿರಲು ಅದರಲ್ಲೂ ಹಿರಿಯರಿಂದ ದೂರ ಇರಲು ಸಲಹೆ.

9.ವಿದೇಶ ಪ್ರಯಾಣ ಮಾಡುವವರು ಸುರಕ್ಷತೆ ಕಾಪಾಡಲು ಸಲ

10.ವಿಮಾನ ನಿಲ್ದಾಣದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ

ಫ್ರೆಶ್ ನ್ಯೂಸ್

Latest Posts

Featured Videos