ಕಾಫಿನಾಡಲ್ಲಿ ಕುಸಿದ ಸೇತುವೆ

ಕಾಫಿನಾಡಲ್ಲಿ ಕುಸಿದ ಸೇತುವೆ

ಚಿಕ್ಕಮಗಳೂರು, ಅ. 14 : ಬೈಕ್ ಸವಾರನೋರ್ವ ಸೇತುವೆ ಮೇಲೆ ಸಂಚರಿಸೋ ವೇಳೆ ಸೇತುವೆ ಕುಸಿದು ಬಿದ್ದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಳಿಂಗನಾಡು ಗ್ರಾಮದಲ್ಲಿ ನಡೆದಿದೆ. ಬೈಕ್ ಸವಾರ ಪ್ರದೀಪ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, 40-50 ಅಡಿ ಸೇತುವೆ ಕುಸಿಯುತ್ತಿದ್ದಂತೆ ಬೈಕ್ ಸಮೇತ ಹಳ್ಳಕ್ಕೆ ಬಿದ್ದಿದ್ದಾನೆ.
ನೀರಿನ ರಭಸಕ್ಕೆ ಸ್ವಲ್ಪ ದೂರ ಕೊಚ್ಚಿಹೋಗಿದ್ದ ಪ್ರದೀಪ್ ಮತ್ತೆ ಈಜಿ ದಡಸೇರಿ ಜೀವ ಉಳಿಸಿಕೊಂಡಿದ್ದಾನೆ. ಸದ್ಯ ಗಾಯಗೊಂಡಿರೋ ವ್ಯಕ್ತಿಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇದೇ ವೇಳೆ ಸೇತುವೆ ಸಂಪರ್ಕ ಕಡಿತಗೊಂಡಿರೋದ್ರಿಂದ ಕೂವೆ-ಹಿರೇಬೈಲು ಸೇರಿದಂತೆ ಹತ್ತಾರು ಗ್ರಾಮಗಳ ಜನರು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos